ಪ್ರಭಾಕರ ಕೋರೆ ನಾಡಿನ ಸಾಧನಾ ಶಿಖರ-ಮಾಸೂರ

| Published : Aug 04 2024, 01:22 AM IST

ಸಾರಾಂಶ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜಕೀಯ-ಸಹಕಾರಿ ರಂಗಗಳಲ್ಲಿ ಅಚ್ಚಳಿಯದ ಕಾರ್ಯ ಮಾಡಿರುವ ಡಾ. ಪ್ರಭಾಕರ ಕೋರೆ ನಾಡಿನ ಸಾಧನಾ ಶಿಖರವಾಗಿದ್ದಾರೆ ಎಂದು ಡಾ. ಪ್ರಭಾಕರ ಕೋರೆ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಬಸವರಾಜ ಮಾಸೂರ ಹೇಳಿದರು.

ಹಾವೇರಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜಕೀಯ-ಸಹಕಾರಿ ರಂಗಗಳಲ್ಲಿ ಅಚ್ಚಳಿಯದ ಕಾರ್ಯ ಮಾಡಿರುವ ಡಾ. ಪ್ರಭಾಕರ ಕೋರೆ ನಾಡಿನ ಸಾಧನಾ ಶಿಖರವಾಗಿದ್ದಾರೆ ಎಂದು ಡಾ. ಪ್ರಭಾಕರ ಕೋರೆ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಬಸವರಾಜ ಮಾಸೂರ ಹೇಳಿದರು.

ಸ್ಥಳೀಯ ಇಜಾರಿ ಲಕಮಾಪುರದ ಜ್ಞಾನಜ್ಯೋತಿ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಡಾ. ಪ್ರಭಾಕರ ಕೋರೆ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಡಾ. ಪ್ರಭಾಕರ ಕೋರೆ ಅವರ ೭೭ನೇ ವರ್ಷದ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡು-ನುಡಿಗೆ ತಮ್ಮ ನಿಸ್ವಾರ್ಥ ಸೇವೆ ನೀಡಿ, ಇಂದು ನಮ್ಮೆಲ್ಲರಿಗೆ ಆದರ್ಶವಾಗಿರುವ ಕೋರೆ ಅವರು ದೇಶಾಭಿವೃದ್ಧಿಯಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಂತೂ ಹೊಸತನದ ಅಧ್ಯಯನಕ್ಕಾಗಿ ಹಲವಾರು ಯೋಜನೆಗಳನ್ನು ತಂದು ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿದ್ದಾರೆ ಎಂದರು.

ಸೊಸೈಟಿಯ ಪದಾಧಿಕಾರಿಗಳಾದ ಶಿವಯೊಗೆಪ್ಪ ಕೊಳ್ಳಿ, ನಿರಂಜನ ಹೇರೂರ, ವಿನಯ ಶಿರೂರ, ಸುಭಾಶ್ಚಂದ್ರ ಹುರಳಿಕುಪ್ಪಿ, ದಯಾನಂದ ಯಡ್ರಾಮಿ ಹಾಗೂ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ, ಶಾಲಾ ಶಿಕ್ಷಕರು ಇದ್ದರು.

ಕಾರ್ಯಕ್ರಮದ ಆನಂತರ ವಿದ್ಯಾರ್ಥಿಗಳಿಗೆ ವಸ್ತ್ರಗಳನ್ನು, ಸಿಹಿ ತಿಂಡಿ ವಿತರಿಸಲಾಯಿತು.