ಹಿರಿಯರ ನಿಸ್ವಾರ್ಥ ಸೇವೆಯಿಂದ ಸಂಸ್ಥೆಯ ಉನ್ನತಿ

| Published : Sep 22 2025, 01:00 AM IST

ಹಿರಿಯರ ನಿಸ್ವಾರ್ಥ ಸೇವೆಯಿಂದ ಸಂಸ್ಥೆಯ ಉನ್ನತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು ಅವರ ಜೀವನಾದರ್ಶವೇ ನಮ್ಮ ಏಳಿಗೆಗೆ ಕಾರಣ

ಕನ್ನಡಪ್ರಭ ವಾರ್ತೆ ಮೈಸೂರುನಾರಾಯಣಶಾಸ್ತ್ರೀ ರಸ್ತೆಯ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.ಕಾಲೇಜಿನ ಟಿ.ಪಿ. ಕೈಲಾಸಂ ರಂಗಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ ಎಂ. ಶೈಲಜಾ, ಗಣಿತಶಾಸ್ತ್ರ ಉಪನ್ಯಾಸಕಿ ಕೆ. ನಂದಿನಿ. ರಸಾಯನಶಾಸ್ತ್ರ ಉಪನ್ಯಾಸಕ ಎಂ.ಬಿ. ಮನು ಅವರನ್ನು ಪುರಸ್ಕರಿಸಲಾಯಿತು.ಈ ವೇಳೆ ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ಕೃ.ಪಾ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಗೌರವ ಅಧ್ಯಕ್ಷ ಪ್ರೊ. ಎಂ.ಎಸ್.ಕೆ. ನರಹರಿ ಬಾಬು ಮಾತನಾಡಿ, ಹಿರಿಯರ ನಿಸ್ವಾರ್ಥ ಸೇವೆಯೇ ಸಂಸ್ಥೆಯ ಇಂದಿನ ಉನ್ನತಿಗೆ ಕಾರಣ ಎಂದು ಸಂಸ್ಥೆಯೊಂದಿಗಿನ ತಮ್ಮ ಅನುಭವಗಳನ್ನು ಸ್ಮರಿಸಿಕೊಂಡರು.ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು ಅವರ ಜೀವನಾದರ್ಶವೇ ನಮ್ಮ ಏಳಿಗೆಗೆ ಕಾರಣ ಎಂದು ತಿಳಿಸಿದರು.ಹಿರಿಯರಾದ ಪ್ರೊ.ಎಂ.ಎಸ್. ಲಕ್ಷ್ಮೀನಾರಾಯಣ ಶಾಸ್ತ್ರಿ, ಪ್ರೊ.ಜಿ.ಎಸ್. ಶಿವಶಂಕರ್. ಸಿ.ಎನ್. ಯದುನಂದನ್ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಉಪ ಪ್ರಾಂಶುಪಾಲ ಇಂದುಮತಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ವೈ.ಆರ್. ರಮೇಶ ವಂದಿಸಿದರು. ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪ್ರಯೋಗ ಕೈಪಿಡಿ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿನಿ ವಿ. ಚೈತನ್ಯ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಟಿ.ಎನ್‌. ವಿದ್ಯಾ ನಿರೂಪಿಸಿದರು.