5 ನೇ ಬಾರಿ ಸಹಕಾರ ಭಾರತಿಗೆ ಗೆಲುವು: ಯಡಗೆರೆ ಸುಬ್ರಮಣ್ಯ

| Published : Feb 06 2025, 11:48 PM IST

ಸಾರಾಂಶ

ನರಸಿಂಹರಾಜಪುರ: ಮಾಮ್ಕೋಸ್ ಅಭಿವೃದ್ಧಿ ಕೆಲಸ ಮೆಚ್ಚಿ ಮತದಾರರು 5 ನೇ ಬಾರಿ ಸಹಕಾರ ಭಾರತಿ ತಂಡವನ್ನು ಗೆಲ್ಲಿಸಿದ್ದಾರೆ ಎಂದು ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ತಿಳಿಸಿದರು.

ನರಸಿಂಹರಾಜಪುರ

ಮಾಮ್ಕೋಸ್ ಅಭಿವೃದ್ಧಿ ಕೆಲಸ ಮೆಚ್ಚಿ ಮತದಾರರು 5 ನೇ ಬಾರಿ ಸಹಕಾರ ಭಾರತಿ ತಂಡವನ್ನು ಗೆಲ್ಲಿಸಿದ್ದಾರೆ ಎಂದು ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ ಯಡಗೆರೆ ಸುಬ್ರಮಣ್ಯ ತಿಳಿಸಿದರು.

ಗುರುವಾರ ಪತ್ರಿಕಾ ಹೇಳಿಕೆ ನೀಡಿ, ಮಾಮ್ಕೋಸ್ ಆಡಳಿತ ಮಂಡಳಿ ಚುನಾವಣೆಗೂ ಮುನ್ನ ಸಹಕಾರ ಭಾರತಿ ಪ್ರಣಾಳಿಕೆ ಘೋಷಣೆ ಮಾಡಿತ್ತು. ಅದರಂತೆ ಎಲ್ಲಾ ಭರವಸೆ ಈಡೇರಿಸಿ ಷೇರುದಾರರ ಕ್ಷೇಮಾಭಿವೃದ್ಧಿ ಸಾಧಿಸಲು ಬದ್ಧರಾಗಿ ದ್ದೇವೆ. ಈ ಬಾರಿ ಚುನಾವಣೆಯಲ್ಲಿ 11,511 ಅರ್ಹ ಮತದಾರರಿದ್ದರು. 6,644 ಅನರ್ಹ ಮತ ದಾರರು ಹೈ ಕೋರ್ಟು ಮೂಲಕ ಮತದಾನದ ಹಕ್ಕು ಪಡೆದಿದ್ದರು. ಇವರನ್ನು ಸೇರಿಸಿ ಒಟ್ಟು 18,155 ಮತದಾರರು ಇದ್ದರು. ಈ ಪೈಕಿ 12,180 ಮತದಾರರು (ಶೇ.67) ಮತ ನೀಡಿದ್ದಾರೆ.

ಮಾಮ್ಕೋಸ್ 5ನೇ ಬಾರಿ ಸಹಕಾರ ಭಾರತಿ ಅಧಿಕಾರ ಹಿಡಿದಿದೆ. ಅನರ್ಹ ಮತದಾರರ ಕುರಿತು ಕೋರ್ಟ್ ತೀರ್ಮಾನದ ನಂತರ ಹೊಸ ಆಡಳಿತ ಮಂಡಳಿ ರಚನೆಯಾಗಲಿದೆ ಎಂದರು.

ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಹಾಗೂ ಅದನ್ನು ಬೆಂಬಲಿಸಿದ ಕಾಂಗ್ರೆಸ್‌ ಪಕ್ಷದ ಮುಖಂಡರು ಚುನಾವಣೆ ಸಮಯದಲ್ಲಿ ಸಹಕಾರ ಭಾರತಿ ಮೇಲೆ ಹಲವಾರು ಅಪಾದನೆ ಮಾಡಿದ್ದರು. ಆದರೆ, ಚುನಾವಣೆಯಲ್ಲಿ ಮತದಾರರು ಸಹಕಾರ ಭಾರತಿ ಬೆಂಬಲಿಸಿ 19 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಉತ್ತರ ನೀಡಿದ್ದಾರೆ. ಕಳೆದ 20 ವರ್ಷಗಳಿಂದ ಸಹಕಾರ ಭಾರತಿ ನೇತೃತ್ವದ ತಂಡ ಅಧಿಕಾರದಲ್ಲಿದ್ದು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅಭಿವೃದ್ಧಿ ಕೆಲಸವೇ ನಮ್ಮ ತಂಡವನ್ನು ಗೆಲ್ಲಿಸಿದೆ ಎಂದರು.

ಮಾಮ್ಕೋಸ್‌ ಚುನಾವಣೆಯಲ್ಲಿ 19 ಅಭ್ಯರ್ಥಿಗಳ ಗೆಲುವಿಗೆ ಮಾರ್ಗದರ್ಶನ ಮಾಡಿದ ಸಂಘ ಪರಿವಾರದ ಹಿರಿಯರು, ಸಹಕಾರ ಭಾರತಿ ಪ್ರಮುಖರು ಹಾಗೂ ನಮ್ಮ ಜೊತೆ ಕೈ ಜೋಡಿಸಿದ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.