ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಉದ್ಬೂರು ಗೇಟ್ ಬಳಿಯ ಡಾ. ವಿಷ್ಣುವರ್ಧನ್ ಸ್ಮಾರಕದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನಟ ಅನಿರುದ್ಧ ಉದ್ಘಾಟಿಸಿದರು.ನಂತರ ಅನಿರುದ್ಧ ಮಾತನಾಡಿ, ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಶ್ವದೆಲ್ಲಡೆಯಿದ್ದಾರೆ. ಇಂದು 14ನೇ ವರ್ಷದ ಪುಣ್ಯಸ್ಮರಣೆ ಅಭಿಮಾನಿಗಳು ವಿವಿಧೆಡೆ ರಸಮಂಜರಿ ಕಾರ್ಯಕ್ರಮ, ಅನ್ನಸಂತರ್ಪಣೆ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನ ಆಯೋಜಿಸಿದ್ದಾರೆ ಎಂದರು.
ವಿಷ್ಣು ಸ್ಮಾರಕದಲ್ಲಿ ಪ್ರತಿ ವಾರ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದವರು ರಕ್ತದಾನ ಶಿಬಿರ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯವಾದ ಕೆಲಸ. ಗ್ರಾಮೀಣ ಮತ್ತು ನಗರ ಪ್ರದೇಶ ಬಡಾವಣೆಗಳಲ್ಲಿ ವಿಷ್ಣು ಅಪ್ಪಾಜಿ ಅವರ ಭಾವಚಿತ್ರ ಹಾಕಿ ಸಮಾಜಮಖಿ ಕೆಲಸ ಮಾಡುತ್ತಿದ್ದಾರೆ. ಅವರ ಚಿತ್ರಗಳು ಕೌಟುಂಬಿಕ ಪ್ರಧಾನವಾಗಿದ್ದವು, ಸಮಾಜದಲ್ಲಿ ಶ್ರಮಜೀವಿಗಳಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ ಎಂದರು.50 ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರೋಟರಿ ಕ್ಲಬ್ಸೌ ತ್ ಈಸ್ಟ್ ಕಾರ್ಯದರ್ಶಿ ಎನ್.ಟಿ. ಗಿರೀಶ್, ಮುಖಂಡರಾದ ನಟರಾಜ್, ಅಜಯ್ ಶಾಸ್ತ್ರಿ, ಲಿಂಗರಾಜು, ವಿಷ್ಣುಸೇನಾ ಅಧ್ಯಕ್ಷ ಶ್ರೀಕಂಠೇಗೌಡ, ಮರಟಿಕ್ಯಾತನಹಳ್ಳಿ ಮಂಜು, ವರುಣ ಮಹದೇವ್, ಜಟ್ಟಿಹುಂಡಿ ಗೋಪಾಲ್, ರಶ್ಮಿ, ಪ್ರಭು, ಸುರೇಶ್ ಮೊದಲಾದವರು ಇದ್ದರು.
ಡಾ.ವಿಷ್ಣುವರ್ಧನ್ ಅವರ ಆದರ್ಶಗಳನ್ನು ಪಾಲಿಸಲು ಅಭಿಮಾನಿಗಳಿಗೆ ನಟ ಅನಿರುದ್ಧ ಕರೆನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಆದರ್ಶಗಳನ್ನು ಅವರ ಅಭಿಮಾನಿಗಳು ಪಾಲಿಸಬೇಕು ಎಂದು ನಟ ಅನಿರುದ್ಧ ಕರೆ ನೀಡಿದರು.ಮೈಸೂರಿನ ಉದ್ಭೂರು ಗೇಟ್ ಬಳಿಯ ಡಾ.ವಿಷ್ಣುವರ್ಧನ್ ಸ್ಮಾರಕ ಭವನದಲ್ಲಿ ಶನಿವಾರ ಮೈಸೂರು ಮತ್ತು ಬೆಂಗಳೂರು ರೋಟರಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ ಅವರು ಕಲಾವಿದರಾಗಿ ಸಮಾಜ ಸೇವೆ ಮಾಡುತ್ತಿದ್ದರು. ಅವರು ಮಾಡಿದ ಉಪಕಾರಗಳನ್ನು ಯಾರಿಗೂ ಹೇಳುತ್ತಿರಲಿಲ್ಲ. ಬಡವರಿಗೆ, ಸಂಘ ಸಂಸ್ಥೆಗಳಿಗೆ ನೆರವಾಗಿದ್ದರು. ಅವರ ಆದರ್ಶಗಳನ್ನು ಅಭಿಮಾನಿಗಳು ಮತ್ತು ಸಾರ್ವಜನಿಕರು ಮಾದರಿಯಾಗಿಟ್ಟುಕೊಂಡು ಎಲ್ಲರಿಗೂ ನೆರವಾಗಬೇಕು ಎಂದರು.ರೋಟರಿ ಸಂಸ್ಥೆಯವರು ಮಾಡುತ್ತಿರುವ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಜನ ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಉಚಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಸಂಗ್ರಹವಾದ ರಕ್ತವನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಈ ಕಾರ್ಯ ಮಾಡುತ್ತಿರುವ ರೋಟರಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.ರೋಟರಿ ಸಂಸ್ಥೆಯ ಜಿಲ್ಲಾ ಪಾಲಕರಾದ ವಿ. ಶ್ರೀನಿವಾಸಮೂರ್ತಿ, ಎಚ್.ಆರ್. ಕೇಶವ್, ಮಾಜಿ ಜಿಲ್ಲಾ ಪಾಲಕ ಬಿ.ಎಲ್. ನಾಗೇಂದ್ರಪ್ರಸಾದ್, ಪದಾಧಿಕಾರಿಗಳಾದ ಮುರುಳಿ, ಸೆಲ್ವಕುಮಾರ್ ಮೊದಲಾದವರು ಇದ್ದರು.ಡಾ.ವಿಷ್ಣುವರ್ಧನ್ ಸ್ಮಾರಕ ಭವನದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಅಭಿಮಾನಿಗಳು ಭೋಜನ ಏರ್ಪಡಿಸಲಾಗಿತ್ತು.ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳ ಹೋರಾಟ ಮಾಡುತ್ತಿದ್ದು, ಬಾಲಣ್ಣ ಅವರ ಕುಟುಂಬಕ್ಕೆ ಮನವಿ ಮಾಡಿದ್ದೇನೆ. 10 ಗುಂಟೆ ಜಾಗವನ್ನು ಕೇಳಿದ್ದೇವೆ. ಇದರ ಬಗ್ಗೆ ಸರ್ಕಾರ ನಿರ್ಧಾರಗಳು ಬೇಗ ಸಮ್ಮತಿಸಿದರೇ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿಯಾಗುತ್ತದೆ.- ಅನಿರುದ್ಧ, ಚಿತ್ರನಟ