ಸಾರಾಂಶ
ಸಾಹಿತಿ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳು ಫೆ.25 ರಂದು ಬೆಳಗ್ಗೆ 10.30 ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಉದ್ಬವ ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಹೇಳಿದರು.
ಚಿಕ್ಕಮಗಳೂರು: ಸಾಹಿತಿ ಟಿ.ದೇವಿದಾಸ್ ವಿರಚಿತ ನಾಲ್ಕು ಪುಸ್ತಕಗಳು ಫೆ.25 ರಂದು ಬೆಳಗ್ಗೆ 10.30 ಕ್ಕೆ ನಗರದ ಕುವೆಂಪು ಕಲಾಮಂದಿರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಉದ್ಬವ ಪ್ರಕಾಶನದ ಪ್ರಧಾನ ಕಾರ್ಯದರ್ಶಿ ಸಾಹಿತಿ ಡಾ. ಬೆಳವಾಡಿ ಮಂಜುನಾಥ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಬವ ಪ್ರಕಾಶನ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯ ವಹಿಸಲಿದ್ದು, ಉದ್ಬವ ಪ್ರಕಾಶನ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಇನ್ನೂರಾ ಇಪ್ಪತ್ತೆರಡು ಅಂಕಣ ಬರಹಗಳುಳ್ಳ ಅಭಿಮುಖ ಎರಡು ಸಂಪುಟಗಳನ್ನು ಪರಿಚಯಿಸಲಿದ್ದಾರೆ. ಕನ್ನಡದ ಯೂಟ್ಯೂಬ್ ಚಾನಲ್ ಆಗಿರುವ ಮೀಡಿಯಾ ಮಾಸ್ಟರ್ಸ್ ಮುಖ್ಯಸ್ಥ ಎಂ.ಎಸ್ ರಾಘವೇಂದ್ರ ಮೋದಿ: ಹಳಿ ಹಿಡಿದ ಭಾರತ ಪುಸ್ತಕ ಪರಿಚಯಿಸಲಿದ್ದಾರೆ ಎಂದು ಹೇಳಿದರು.ಹಾಗೆ ಸುಮ್ಮನೆ ಪುಸ್ತಕವನ್ನು ರಂಗಕರ್ಮಿ ಡಿ.ಎಂ. ಮಂಜುನಾಥಸ್ವಾಮಿ ಪರಿಚಯಿಸಲಿದ್ದಾರೆ. ಗಾಯಕಿ ಜ್ಯೋತಿ ವಿನೀತ್ ಕುಮಾರ್, ನಿರೂಪಕಿ ಮೌನ ಗಿರೀಶ್, ಲೇಖಕ ಟಿ.ದೇವಿದಾಸ್ ಭಾಗವಹಿಸಲಿದ್ದಾರೆ. ನಾಲ್ಕೂ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉದ್ಬವ ಪ್ರಕಾಶನದ ಹಿರೇಮಗಳೂರು ಪುಟ್ಟಸ್ವಾಮಿ ಮತ್ತು ಶಿವಶಂಕರ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 22 ಕೆಸಿಕೆಎಂ 3