ಸಾರಾಂಶ
ಗದಗ: ನಂಬಿ ಬಂದ ಭಕ್ತರನ್ನು ಶಿರಡಿ ಸಾಯಿಬಾಬಾ ಕೈಬಿಟ್ಟಿಲ್ಲ, ಬರಿಗೈಯಲ್ಲಿ ಕಳುಹಿಸಿಲ್ಲ. ಬಾಬಾ ಅವರ ಸಚ್ಚರಿತ್ರೆ ಶ್ರದ್ಧಾಭಕ್ತಿಯಿಂದ ಪಠಿಸಿದರೆ ಫಲ ಪ್ರಾಪ್ತಿಯಾಗುವುದು ಎಂಬುದನ್ನು ನಾವು ಹಲವಾರು ಸಂದರ್ಭ ಸನ್ನಿವೇಶಗಳಿಂದ ತಿಳಿದಿದ್ದೇವೆ ಎಂದು ಧಾರ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಅವರು ನಗರದ ಶ್ರೀಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ನಡೆದ ಶ್ರೀಸಾಯಿ ಸಚ್ಛರಿತ್ರೆ ಪ್ರವಚನ ಮಹಾಮಂಗಲಗೊಳಿಸಿ ಮಾತನಾಡಿದರು.ಸ್ಮರಣೆ- ಧ್ಯಾನವೇ ನನ್ನ ಉಸಿರು-ಬದುಕು ಎಂದು ಸಾಯಿಬಾಬಾನಲ್ಲಿ ನಂಬಿಕೆ ಇಟ್ಟು ಮುನ್ನಡೆದರೆ ಬಾಬಾ ಸನ್ಮಾರ್ಗದಲ್ಲಿ ಮುನ್ನಡೆಸುವನ್ನು ಅಂತಹ ಸನ್ಮಾರ್ಗದಲ್ಲಿ ಮುನ್ನಡೆಯುವ ಬದುಕು ನಿಮ್ಮದಾಗಲಿ ಎಲ್ಲ ಪ್ರವಚನಗಳನ್ನು ಶ್ರದ್ಧೆಯಿಂದ ಆಲಿಸಿದ ಸಮಸ್ತ ಭಕ್ತಾದಿಗಳಿಗೆ ಬಾಬಾ ಸನ್ಮಂಗಲವನ್ನುಂಟು ಮಾಡಲಿ ಎಂದರು.
ಪ್ರವಚನ ಮಾಲಿಕೆಯ ಪ್ರಸಾದ ಸೇವೆ ವಹಿಸಿಕೊಂಡಿದ್ದ ಡಾ.ಎಸ್.ಬಿ.ಶೆಟ್ಟರ, ಮಹೇಶಗೌಡ ತಲೇಗೌಡ್ರ, ಜಗದೀಶ ಜಿಗಜಿನ್ನಿ, ರಮೇಶ ನಂದಿಕೇಶ್ವರಮಠ, ಫಕ್ಕೀರಪ್ಪ ಹೋಳಿ, ಜಯಪ್ರಕಾಶ ಬೆಲ್ಲದ, ಕವಿತಾ ಕೃಷ್ಣರಡ್ಡಿ ಕೊಣ್ಣೂರ, ಶಾಂತಾದೇವಿ ತುಪ್ಪದ, ಶ್ರೀದೇವಿ ಶರಣಗೌಡ ಪಾಟೀಲ ಪರಿವಾರವನ್ನು ಸನ್ಮಾನಿಸಿ ಗೌರವಿಸಲಾಯಿತು.ಸಾಯಿಬಾಬಾ ಅವರ ಧುನಿ ನಿರ್ಮಾಣಕ್ಕಾಗಿ ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ ₹ 50 ಸಾವಿರ, ಡಾ. ಎಸ್.ಬಿ.ಶೆಟ್ಟರ್ ₹ 50 ಸಾವಿರ, ಡಾ.ಎಸ್.ಡಿ. ಯರಗೇರಿ ₹ 25 ಸಾವಿರ, ರವಿ ಪ್ರಕಾಶ ರಡ್ಡಿ ₹ 25 ಸಾವಿರ, ಅಕ್ಕಮಹಾದೇವಿ ಪಂಪನಗೌಡ್ರ ₹ 25 ಸಾವಿರ ಹಾಗೂ ತಲಾ ₹ 11 ಸಾವಿರ ನೀಡಿದ ವೀರಣ್ಣ ಕಡಗದ, ಪ್ರಭುಗೌಡ ತಲೆಗೌಡ್ರ, ಫಕ್ಕೀರಪ್ಪ ಹೋಳಿ, ಬೆಳದಡಿ ಗ್ರಾಮದ ಡಾ.ಮಹಾಂತೇಶ ಸಜ್ಜನ, ಸಂಗವ್ವ ಬುಳ್ಳಾ, ವಿ.ಆರ್. ಕುಂಬಾರ, ಯೋಗೇಶ ಸಾವಕಾರ ಪರಿವಾರದವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ 10 ದಿನಗಳಿಂದ ಶ್ರೀಸಾಯಿ ಸಚ್ಛರಿತ್ರೆ ಪ್ರವಚನ ಮಾಡಿದ ಡಾ. ಎಸ್.ಬಿ.ಶೆಟ್ಟರ್ ಹಾಗೂ ಆಶಾ ಶೆಟ್ಟರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಡಾ.ಶರಣಬಸವ ವೆಂಕಟಾಪೂರ, ಐ.ಕೆ. ಕಮ್ಮಾರ, ಅಂದಾನೆಪ್ಪ ವಿಭೂತಿ, ಕಡಣಿ ಶಾಸ್ತ್ರೀ ಸೇರಿದಂತೆ ಇತರರು ಇದ್ದರು. ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ, ವಂದಿಸಿದರು.