ಸಾರಾಂಶ
ಸಕಲರ ಒಳಿತಿಗಾಗಿ ಸಾಯಿಬಾಬಾ ಅಂದು ಶಿರಡಿಯಲ್ಲಿ ಹೊತ್ತಿಸಿದ ಧುನಿ ಇಂದಿಗೂ ಪ್ರಜ್ವಲಿಸುತ್ತಿದೆ
ಗದಗ: ನಂಬಿದ ಭಕ್ತರನ್ನು ಕೈ ಬಿಡದ ಸಾಯಿಬಾಬಾ ಸಕಲ ಜೀವಿಗಳಲ್ಲೂ ನಾನಿದ್ದೇನೆ ಎಂದು ಹೇಳುವ ಮೂಲಕ ಮಾನವ ಸಂಕುಲ ಸೇರಿದಂತೆ ಸಕಲ ಜೀವಿಗಳನ್ನು ಸಂರಕ್ಷಿಸಿದವರು ಎಂದು ಡಾ. ಎಸ್.ಬಿ.ಶೆಟ್ಟರ ಹೇಳಿದರು.
ಅವರು ಮಂಗಳವಾರ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜು. 20ರವರೆಗೆ ನಡೆಯಲಿರುವ ಸಾಯಿ ಸಚ್ಛರಿತ್ರೆ ಪ್ರವಚನ ಮಾಲಿಕೆ 5 ರಲ್ಲಿ ಮಾತನಾಡಿದರು.ಸಕಲರ ಒಳಿತಿಗಾಗಿ ಸಾಯಿಬಾಬಾ ಅಂದು ಶಿರಡಿಯಲ್ಲಿ ಹೊತ್ತಿಸಿದ ಧುನಿ ಇಂದಿಗೂ ಪ್ರಜ್ವಲಿಸುತ್ತಿದೆ. ಜ್ಞಾನ, ಆಶೀರ್ವಾದದ ಪ್ರತೀಕವಾಗಿ ನೆಲೆ ನಿಂತಿರುವ ಧುನಿಯನ್ನು ಇಂದಿನವರೆಗೂ ಸಂರಕ್ಷಿಸಿಕೊಂಡು ಬರಲಾಗಿದೆ ಅದರೆ ಮಾದರಿಯ ಧುನಿಯನ್ನು ಗದುಗಿನ ಸಾಯಿಬಾಬಾ ಮಂದಿರದ ಬಳಿ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು ಈಗಾಗಲೇ ಭೂಮಿಪೂಜೆ ಆಗಿದೆ ಎಂದರು.
ದೇಣಿಗೆ ನೀಡಿದ ಡಾ. ಟಿ.ಎನ್. ಗೋಡಿ, ಪ್ರವಚನದ ಪ್ರಸಾದ ಸೇವೆ ವಹಿಸಿಕೊಂಡಿದ್ದ ಡಾ. ಸೌಭಾಗ್ಯಲಕ್ಷ್ಮೀ ಸುನೀಲಗೌಡ ಪೊಲೀಸ್‌ಪಾಟೀಲ, ಶರಣಪ್ಪಗೌಡ್ರ ಗುರುಬಸಪ್ಪ ಯಾದವಾಡ, ಗೋಪಾಲಕೃಷ್ಣ ಟಿ. ಹೇಮಾದ್ರಿ, ಎಸ್.ಬಿ. ಕಣವಿ ಪರಿವಾರವನ್ನು ಸನ್ಮಾನಿಸಿ ಗೌರವಿಸಲಾಯಿತು.ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ, ವಂದಿಸಿದರು.