ಸಾಯಿಬಾಬಾರ ಹುಟ್ಟುಹಬ್ಬ: 99 ವಿದ್ಯಾರ್ಥಿಗಳ ದತ್ತು

| Published : Nov 24 2024, 01:48 AM IST

ಸಾರಾಂಶ

ಸಾಯಿಬಾಬಾ ಅವರ ಹುಟ್ಟುಹಬ್ಬದ ಅಂಗವಾಗಿ 99 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಜೊತೆಗೆ ಶಾಲಾ ಶುಲ್ಕ 1 ಲಕ್ಷದ 99 ಸಾವಿರ ರು. ಪಾವತಿದರು. ಸರ್ಕಾರಿ ಶಾಲೆ 200, ಬಿಜಿಎಸ್ ಶಾಲೆ 99 ಹಾಗೂ ಪೂರ್ಣಯ್ಯ ಬೀದಿಯಲ್ಲಿನ 98 ಶಾಲೆಯ 1 ರಿಂದ 10ನೇ ತರಗತಿಯ ಒಟ್ಟು 397 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ, ಜ್ಯಾಮಿಟ್ರಿ ಬಾಕ್ಸ್ ಸೇರಿದಂತೆ ಇನ್ನಿತರೆ ಶಾಲಾ ಸಲಕರಣೆ ನೀಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಾಯಿಬಾಬಾರ 99ನೇ ಹುಟ್ಟುಹಬ್ಬವನ್ನು ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ 1 ಲಕ್ಷದ 99 ಸಾವಿರ ರು. ಜೊತೆಗೆ 99 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉಚಿತವಾಗಿ ಶಾಲಾ ಬ್ಯಾಗ್ ಹಾಗೂ ಸಲಕರಣೆಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪಟ್ಟಣದ ಚೆಕ್ ಪೋಸ್ಟ್ ಬಳಿಯ ಶ್ರೀಸಾಯಿ ಮಂದಿರ ಆಶ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಹಾಗೂ ಆಶ್ರಮದ ಮುಖ್ಯಸ್ಥ ಸಾಯಿಕುಮಾರ್ ಅವರು, ಸಾಯಿಬಾಬಾ ಅವರ ಹುಟ್ಟುಹಬ್ಬದ ಅಂಗವಾಗಿ 99 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಜೊತೆಗೆ ಶಾಲಾ ಶುಲ್ಕ 1 ಲಕ್ಷದ 99 ಸಾವಿರ ರು. ಪಾವತಿದರು.

ಸರ್ಕಾರಿ ಶಾಲೆ 200, ಬಿಜಿಎಸ್ ಶಾಲೆ 99 ಹಾಗೂ ಪೂರ್ಣಯ್ಯ ಬೀದಿಯಲ್ಲಿನ 98 ಶಾಲೆಯ 1 ರಿಂದ 10ನೇ ತರಗತಿಯ ಒಟ್ಟು 397 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ, ಜ್ಯಾಮಿಟ್ರಿ ಬಾಕ್ಸ್ ಸೇರಿದಂತೆ ಇನ್ನಿತರೆ ಶಾಲಾ ಸಲಕರಣೆ ನೀಡಿದರು.

ಪ್ರತೀ ವರ್ಷದಂತೆ ಈ ಬಾರಿಯೂ ಸಹ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ. ಮುಂದಿನ ವರ್ಷ ಮತ್ತಷ್ಟು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಸಾಯಿಕುಮಾರ್ ತಿಳಿಸಿದರು.

ಸಾಯಿಬಾಬಾರ 99ನೇ ಹುಟ್ಟುಹಬ್ಬ ಆಶ್ರಮದಲ್ಲಿ ಶ್ರೀಸಾಯಿಬಾಬಾ ರವರ ಮೂರ್ತಿಗೆ ವಿಶೇಷವಾಗಿ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬಾಬಾ ಅವರ ದರ್ಶನ ಮಾಡುವ ಆಗಮಿಸಿದ್ದ ಭಕ್ತರಿಗೆ ಆಶ್ರಮದಿಂದ ಅನ್ನದಾಸೋಹ, ಪ್ರಸಾದ ಹಾಗೂ ಸಿಹಿ ವಿತರಣೆ ಮಾಡಲಾಯಿತು.

ಈ ವೇಳೆ ವೇದ ಬ್ರಹ್ಮ ಡಾ.ಭಾನುಪ್ರಕಾಶ್‌ಶರ್ಮಾ, ಪುರಸಭೆ ಸದಸ್ಯ ಎಸ್.ಪ್ರಕಾಶ್, ಶೀಲಾ ನಂಜುಂಡಯ್ಯ, ಡಾ. ಸಾಯಿವೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.