ಪಟ್ಟಣದಲ್ಲಿ ದನ-ಕರು, ಕುರಿ–ಕೋಳಿ ಮಾರುಕಟ್ಟೆ ಆರಂಭಗೊಂಡಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಸೈದಾಪುರ ಪಟ್ಟಣವು ಶಿಕ್ಷಣ ಹಾಗೂ ವಾಣಿಜ್ಯ ವ್ಯವಹಾರಕ್ಕೆ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಇದ್ದರೂ 30 ವರ್ಷಗಳಿಂದ ರೈತರಿಗೆ ದನ-ಕರು, ಕುರಿ, ಕೋಳಿ ಸಹಿತ ಜಾನುವಾರುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಸೂಕ್ತ ಸೌಲಭ್ಯವಿರಲಿಲ್ಲ. ಹೀಗಾಗಿ ರೈತರು ಸುಮಾರು 40 ಕಿ.ಮೀ. ದೂರದ ಜಿಲ್ಲಾ ಕೇಂದ್ರ ಯಾದಗಿರಿಗೆ ತೆರಳಬೇಕಾಗಿತ್ತು. ಕೆಲವರು ಶಹಾಪುರ ಹಾಗೂ ಗುರುಮಠಕಲ್ ಮಾರುಕಟ್ಟೆಗಳನ್ನೂ ಅವಲಂಬಿಸಬೇಕಾಗಿತ್ತು.
ಕನ್ನಡಪ್ರಭ ವಾರ್ತೆ ಸೈದಾಪುರ
ಪಟ್ಟಣದಲ್ಲಿ ದನ-ಕರು, ಕುರಿ–ಕೋಳಿ ಮಾರುಕಟ್ಟೆ ಆರಂಭಗೊಂಡಿದ್ದು, ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ಸೈದಾಪುರ ಪಟ್ಟಣವು ಶಿಕ್ಷಣ ಹಾಗೂ ವಾಣಿಜ್ಯ ವ್ಯವಹಾರಕ್ಕೆ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಇದ್ದರೂ 30 ವರ್ಷಗಳಿಂದ ರೈತರಿಗೆ ದನ-ಕರು, ಕುರಿ, ಕೋಳಿ ಸಹಿತ ಜಾನುವಾರುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಸೂಕ್ತ ಸೌಲಭ್ಯವಿರಲಿಲ್ಲ. ಹೀಗಾಗಿ ರೈತರು ಸುಮಾರು 40 ಕಿ.ಮೀ. ದೂರದ ಜಿಲ್ಲಾ ಕೇಂದ್ರ ಯಾದಗಿರಿಗೆ ತೆರಳಬೇಕಾಗಿತ್ತು. ಕೆಲವರು ಶಹಾಪುರ ಹಾಗೂ ಗುರುಮಠಕಲ್ ಮಾರುಕಟ್ಟೆಗಳನ್ನೂ ಅವಲಂಬಿಸಬೇಕಾಗಿತ್ತು.ಪ್ರತಿ ಗುರುವಾರ ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತಿದ್ದರೂ, ಜಾನುವಾರು ಮಾರಾಟ ಮತ್ತು ಖರೀದಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರೈತಾಪಿ ವರ್ಗಕ್ಕೆ ಇದರ ಸಂಪೂರ್ಣ ಸದ್ಬಳಕೆ ದೊರೆಯದೆ ನಿರಾಶರಾಗಿದ್ದರು. ಈ ಭಾಗದ ರೈತರು ಹಾಗೂ ಸಾಮಾಜಿಕ ಹೋರಾಟಗಾರರ ಒತ್ತಾಸೆಯ ಹಿನ್ನೆಲೆಯಲ್ಲಿ ಇದೀಗ ಸಂಬಂಧಿಸಿದ ಅಧಿಕಾರಿಗಳು ಸೈದಾಪುರದಲ್ಲಿಯೇ ದನ-ಕರು, ಕುರಿ ಹಾಗೂ ಕೋಳಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ರೈತರಿಗೆ ಅನುಕೂಲವಾಗಿದೆ.
* ಭರ್ಜರಿ ವ್ಯಾಪಾರ: ಮಾರುಕಟ್ಟೆ ಆರಂಭವಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನಿಂದಲೇ ಸೈದಾಪುರಕ್ಕೆ ಎತ್ತು, ಆಕಳು, ಕುರಿ ಹಾಗೂ ಕೋಳಿಗಳನ್ನು ರೈತರು ಕರೆತಂದಿದ್ದರು. ಖರೀದಿದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಜಾನುವಾರುಗಳ ಖರೀದಿ–ಮಾರಾಟ ಭರ್ಜರಿಯಾಗಿ ನಡೆಯಿತು. ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ಮಾರುಕಟ್ಟೆ ಅನುಕೂಲವಾಗುವ ನಿರೀಕ್ಷೆ ಇದೆ.ಆಡು ಕುರಿ ದನ ಎತ್ತು ಕೋಳಿ ಮಾರಾಟದ ಬಗ್ಗೆ ಕೃಷಿ ಇಲಾಖೆ ಸಿಬ್ಬಂದಿ ಮತ್ತು ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ್ ಅವರು ಧ್ವನಿವರ್ಧಕ ಕರಪತ್ರ ಹಂಚಿ ಪ್ರಚಾರಗೊಳಿಸಿದರು, ಅದರಂತೆ ಮಾರುಕಟ್ಟೆ ಬಹು ಸಂಖ್ಯೆಯಲ್ಲಿ ಕುರಿ ಆಡು ಎತ್ತು ಕೋಳಿ ದನ ಮಾರಾಟಕ್ಕೆ ಬಂದ ರೈತರಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ್ ಸನ್ಮಾನಿಸಿ ಗೌರವಿಸಿದರು.
-----ಕೋಟ್ 1-----ನಮ್ಮೂರಿನಲ್ಲಿಯೇ ದನ-ಕರು ಹಾಗೂ ಕುರಿ–ಕೋಳಿ ಸಂತೆ ನಡೆಯುತ್ತಿರುವುದು ಬಹಳ ಸಂತೋಷ. ಈ ಭಾಗದ ರೈತರು ಜಾನುವಾರುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಯಾದಗಿರಿ, ಶಹಾಪುರ ಮತ್ತು ಗುರುಮಠಕಲ್‌ಗೆ ತೆರಳಬೇಕಾಗಿತ್ತು. ಇದೀಗ ಸೈದಾಪುರದಲ್ಲಿಯೇ ಮಾರುಕಟ್ಟೆ ಆರಂಭವಾಗಿರುವುದರಿಂದ ರೈತರಿಗೆ ಸಮಯ ಹಾಗೂ ಸಾರಿಗೆ ವೆಚ್ಚ ಉಳಿತಾಯವಾಗಲಿದೆ. : -ಅಂಜನೇಯ ಮಲ್ಹಾರ, ರೈತ
----ಕೋಟ್ 2---ಸೈದಾಪುರ ಜಾನುವಾರ ಸಂತೆಯಲ್ಲಿ ರೈತರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಿ ಪ್ರಾರಂಭ ದಿನದಂದೇ ಜಾನುವಾರ ಮಾರಾಟಕ್ಕೆ ಬಂದ ರೈತರನ್ನು ಕಂಡು ಬಹಳ ಸಂತೋಷವಾಯಿತು. ಇನ್ನು ಮುಂದೇ ಪ್ರತಿ ಗುರುವಾರ ದನಗಳ ಸಂತೆಯಲ್ಲಿ ಕುರಿ ಆಡು, ದನ, ಎತ್ತು, ಎಮ್ಮೆ ಕೋಳಿ ಮಾರಾಟದ ಮಾಡಿ ಸದುಯೋಪಗ ಪಡೆದುಕೊಳ್ಳಬೇಕು.
- ಉಮೇಶ ಕೆ. ಮುದ್ನಾಳ್, ಸಾಮಾಜಿಕ ಹೋರಾಟಗಾರ----ಫೋಟೊ-----
24ವೈಡಿಆರ್4ಸೈದಾಪುರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ಮೊದಲ ಬಾರಿಗೆ ಜರುಗಿದ ಜಾನುವಾರುಗಳ ಸಂತೆಗೆ ಆಗಮಿಸಿದ ರೈತರಿಗೆ ಸನ್ಮಾನಿಸಿ ಸ್ವಾಗತಿಸಲಾಯಿತು.