ಪಾಪನಾಶ ಕೆರೆ ಸ್ವಚ್ಛಗೊಳಿಸಿದ ಸೈನಿಕ ಶಾಲೆ ಮಕ್ಕಳು

| Published : Oct 03 2023, 06:00 PM IST

ಪಾಪನಾಶ ಕೆರೆ ಸ್ವಚ್ಛಗೊಳಿಸಿದ ಸೈನಿಕ ಶಾಲೆ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ಗ್ಲೋಬಲ್ ಸೈನಿಕ ಅಕಾಡೆಮಿ ಮತ್ತು ಭಾರತೀಯ ವಾಯಸೇನೆ ಬೀದರ್‌ ಸಹಯೋಗದಲ್ಲಿ ಭಾನುವಾರ ಗಾಂಧಿ ಜಯಂತಿ ನಿಮಿತ್ತ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ನಗರದ ಪಾಪನಾಶ ಕೆರೆ ಸ್ವಚ್ಛಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಬೀದರ್: ನಗರದ ದಿವ್ಯ ಸಂಕಲ್ಪ ಟ್ರಸ್ಟ್ ಅಡಿ ನಡೆಯುತ್ತಿರುವ ಗ್ಲೋಬಲ್ ಸೈನಿಕ ಅಕಾಡೆಮಿ ಮತ್ತು ಭಾರತೀಯ ವಾಯಸೇನೆ ಬೀದರ್‌ ಸಹಯೋಗದಲ್ಲಿ ಭಾನುವಾರ ಗಾಂಧಿ ಜಯಂತಿ ನಿಮಿತ್ತ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ನಗರದ ಪಾಪನಾಶ ಕೆರೆ ಸ್ವಚ್ಛಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಬೆಳಗ್ಗೆ ವಾಯು ಸೇನೆ ತ್ರಿಕೋನ (ಶಿವನಗರ ದಕ್ಷಿಣ) ಬಳಿಯಿಂದ ಪಾಪನಾಶ ಕೆರೆವರೆಗೆ ಪ್ರಭಾತ ಫೇರಿ ಮುಖಾಂತರ ನಡೆದು ಸ್ವಚ್ಛತೆಯ ಘೋಷಣೆಗಳನ್ನು ಕೂಗುತ್ತಾ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಭಾರತೀಯ ವಾಯುಸೇನೆ ಬೀದರ್‌ ಎಒಸಿ ಏರ್ ಕಮಾಂಡರ್ ಅಭಿಜೀತ ನಿನೆ ಮತ್ತು ಏರಫೋರ್ಸ್ ಫ್ಯಾಮಿಲಿ ವೆಲ್‌ಫರ್ ಅಸೋಶಿಯನ್ ಅಧ್ಯಕ್ಷೆ ವಿದುಲಾ ನಿನೆ ಮಾತನಾಡಿ, ಪಾಪನಾಶ ಕೆರೆ ಇದೊಂದು ಸೌಂದರ್ಯ ಹೆಚ್ಚಿಸುವ ತಾಣವಾಗಿದ್ದು, ಇದನ್ನು ಸುರಕ್ಷಿತವಾಗಿಡುವುದು ಬೀದರ್ ನಗರದ ಪ್ರತಿಯೊಬ್ಬ ಜನರ ಆದ್ಯ ಕರ್ತವ್ಯವಾಗಿದೆ ಎಂದರು. ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಮಾತನಾಡಿದರು. ಏರ್ಫೋರ್ಸ್ ಸ್ಟೇಷನ್‌ನ ಸ್ಕಾಡನ್ ಲೀಡರ್ ಅಡ್ಜುಡೆಂಟ್ ಆಕಾಂಕ್ಷಾ ಪಾಂಡೆ ಸ್ವಚ್ಛತಾ ಅಭಿಯಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಅಭಿಯಾನದಲ್ಲಿ ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯ ಮುಖ್ಯ ಶಿಕ್ಷಕ ಜ್ಯೋತಿರಾಗ, ಪಿಆರ್‌ಓ ಕಾರಂಜಿ ಸ್ವಾಮಿ ಮತ್ತಿತರರು ಪಾಲ್ಗೊಂಡು ಪಾಪನಾಶ ಕೆರೆ ಮತ್ತು ಆವರಣ ಸ್ವಚ್ಛಗೊಳಿಸಿದರು.