ಸಾರಾಂಶ
ನೀಲೇಗೌಡನಕೊಪ್ಪಲು ಗ್ರಾಮದ ಕಾರ್ಮಕ್ರಮದಲ್ಲಿ ಜಿಗಣೇಹಳ್ಳಿ ನೀಲಕಂಠಪ್ಪ
ಕನ್ನಡಪ್ರಭ ವಾರ್ತೆ, ಕಡೂರುಪರಸ್ಪರ ಪ್ರೀತಿ ವಿಶ್ವಾಸದಿಂದ ಎಲ್ಲ ಜನರ ಪ್ರೀತಿ ಗಳಿಸಬೇಕು ಎಂಬ ಸಂದೇಶ ನೀಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದವರು ದಾರ್ಶನಿಕ ಸಂತ ಸೇವಾಲಾಲ್ ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಬಣ್ಣಿಸಿದರು.ತಾಲೂಕಿನ ನೀಲೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಜಯಂತಿಯಲ್ಲಿ ಸಂತರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸಂತ ಸೇವಾಲಾಲ್ ತಮ್ಮ ಜ್ಞಾನದಿಂದ ಮೌಢ್ಯತೆ ತುಂಬಿದ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದ ಚೇತನ ಅವರಾಗಿದ್ದರು. ಪರಸ್ಪರ ಪ್ರೀತಿ ವಿಶ್ವಾಸದಿಂದ ಎಲ್ಲ ಜನರ ಪ್ರೀತಿ ಗಳಿಸಬೇಕು ಎಂಬ ಸಂದೇಶ ನೀಡಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ದಾರ್ಶನಿಕರಾಗಿದ್ದರು. ಅವರು ಬೋಧಿಸಿದ ತ್ಯಾಗ, ಸರಳತೆ ಮತ್ತು ಕಾಯಕದ ಮಹತ್ವವನ್ನು ಎಲ್ಲರೂ ಅರಿಯಬೇಕು. ಎಂದರು.ಬಂಜಾರ ಸಮಯದಾಯ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮೇಲೇರಬೇಕಿದೆ. ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಬಿಜೆಪಿ ಸರಕಾರದಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಸರ್ಕಾರಿ ಜಯಂತಿಯಾಗಿ ಘೋಷಿಸಲಾಯಿತು. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಯಿತು. ಹಾಗೆಯೇ ನಮ್ಮ ನಾಯಕರು ಹಾಗು ಕಡೂರು ಕ್ಷೇತ್ರದ ನಿಕಟಪೂರ್ವ ಶಾಸಕ ಬೆಳ್ಳಿಪ್ರಕಾಶ್ ಕ್ಷೇತ್ರದ ಎಲ್ಲ ಲಂಬಾಣಿ ತಾಂಡಾಗಳಲ್ಲಿ ಕಾಂಕ್ರೀಟ್ ರಸ್ತೆ, ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದನ್ನು ಮರೆಯುವಂತಿಲ್ಲ. ಬಂಜಾರ ಸಮಯದಾಯದ ಶ್ರೀಮಂತ ಸಂಸ್ಕೃತಿ ಉಳಿಸಿ ಬೆಳೆಸಲು ಯುವಕರು ಗಮನ ಹರಿಸಬೇಕು ಎಂದರು.
ಸಂತ ಸೇವಾಲಾಲರ ಭಾವಚಿತ್ರದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಬಂಜಾರ ಸಮಯದಾಯದ ಜಾನಪದ ಕಲೆ ಬಿಂಬಿಸುವ ನೃತ್ಯ ಗಮನ ಸೆಳೆಯಿತು.ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್‌ನಾಯ್ಕ, ಮುಖಂಡರಾದ ರಮೇಶ್‌ನಾಯ್ಕ, ಚರಣ್‌ನಾಯ್ಕ, ಲಚ್ಚಾನಾಯ್ಕ, ಭರತ್‌ನಾಯ್ಕ,ಎನ್ .ಸಿ ದಿನೇಶ್ ಹಾಗು ಗ್ರಾಮಸ್ತರು ಮುಖಂಡರು ಇದ್ದರು.
15ಕೆಕೆಡಿಯು2.ಕಡೂರು ತಾಲೂಕಿನ ನೀಲೇಗೌಡನ ಕೊಪ್ಪಲು ಗ್ರಾಮದಲ್ಲಿ ಸಂತಸೇವಾಲಾಲರ ಜಯಂತಿ ಆಚರಣೆ ನಡೆಯಿತು.