ಸಂತರದು ತ್ಯಾಗಮಯ ಬದುಕು: ಸತೀಶ ಕುಮಾರ

| Published : Feb 06 2025, 12:19 AM IST

ಸಂತರದು ತ್ಯಾಗಮಯ ಬದುಕು: ಸತೀಶ ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪರಂಪರೆ ನಾವಷ್ಟೇ ಅನುಭವಿಸದೆ ಅದನ್ನು ಇತರರೊಂದಿಗೆ ಹಂಚಿಕೊಂಡು ಎಲ್ಲರೂ ಸುಖವಾಗಿರಲಿ ಎಂಬ ಆಶಯ ತೋರಿಸಿದವರು ಭಾರತೀಯರು

ನರೇಗಲ್ಲ: ದೇಶದಲ್ಲಿ ಜನ್ಮ ತಾಳಿದ ಸಾಧು ಸಂತರು ಎಂದಿಗೂ ಸ್ವಾರ್ಥದ ಬದುಕು ಸಾಗಿಸಿಲ್ಲ, ಅವರದು ಎಂದಿಗೂ ತ್ಯಾಗಮಯ ಬದುಕು, ಅವರು ದೇಶದ ಉದ್ದಾರಕ್ಕಾಗಿ ಬದುಕಿದರೆ ಹೊರತು ಎಂದಿಗೂ ತಮಗಾಗಿ, ತಮ್ಮ ಉದ್ಧಾರಕ್ಕಾಗಿ ಬದುಕಿಲ್ಲ. ಅತಂಹ ಮಹಾಮಹಿಮರಲ್ಲಿ ಕೋಡಿಕೊಪ್ಪದ ವೀರಪ್ಪಜ್ಜನವರೂ ಒಬ್ಬರು ಎಂಬುದನ್ನು ಕೇಳಿ ತಿಳಿದು ಬಹಳಷ್ಟು ಆನಂದವಾಗಿದೆ ಎಂದು ಆರ್ ಎಸ್‌ಎಸ್‌ನ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸತೀಶಕುಮಾರ ಹೇಳಿದರು.

ಅವರು ಕೋಡಿಕೊಪ್ಪದ ವೀರಪ್ಪಜ್ಜನವರ ಜಾತ್ರಾಮಹೋತ್ಸವದ ನಿಮಿತ್ತ ನಡೆದ ಐದನೆ ದಿನದ ಪುರಾಣ ಪ್ರವಚನದಲ್ಲಿ ಭಾರತ ವಿಶ್ವಗುರು ವಿಷಯ ಕುರಿತು ಮಾತನಾಡಿದರು. ಭಾರತದಲ್ಲಿನ ಕುಟುಂಬ ಪದ್ಧತಿ ಜಗತ್ತಿನ ಎಲ್ಲರಿಗೂ ಬಹಳಷ್ಟು ಪ್ರಿಯವಾಗಿದೆ. ನಮ್ಮ ಪರಂಪರೆ ನಾವಷ್ಟೇ ಅನುಭವಿಸದೆ ಅದನ್ನು ಇತರರೊಂದಿಗೆ ಹಂಚಿಕೊಂಡು ಎಲ್ಲರೂ ಸುಖವಾಗಿರಲಿ ಎಂಬ ಆಶಯ ತೋರಿಸಿದವರು ಭಾರತೀಯರು.ದೇಶದಲ್ಲಿನ ಜ್ಞಾನ, ವಿಜ್ಞಾನ, ನಾಗರಿಕತೆ ಎಂದಿಗೂ ಭವ್ಯವಾದದ್ದು. ಇದನ್ನು ಅನುಸರಿಸಲು ಸಾಧ್ಯವಾಗದೆ ನಾವು ಇದೀಗ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡಿದ್ದೇವೆ. ಇದರಿಂದ ನಾವುಗಳು ನಮ್ಮತನ ಕಳೆದುಕೊಂಡು ಇತರರಿಗೆ ದಾಸ್ಯರಾಗುವ ಹಂತಕ್ಕೆ ಬಂದಿದ್ದೇವೆ. ಇದು ಅತ್ಯಂತ ವಿಷಾದನೀಯ ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ.ಎಂ.ಸಿ.ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ.ಹಿರೆವಡೆಯರ, ಪ್ರವಚನಕಾರ ಡಾ.ವಿಶ್ವನಾಥ ಸ್ವಾಮೀಜಿ ಮತ್ತಿತರ ಮಠಾಧೀಶರು ಇದ್ದರು.