ಜೆಸಿಐ ಮಡಂತ್ಯಾರಿನ 36 ನೇ ಅಧ್ಯಕ್ಷೆಯಾಗಿ ಹಾಗೂ ದ್ವಿತೀಯ ಮಹಿಳಾ ಅಧ್ಯಕ್ಷೆಯಾಗಿ ಜೇಸಿ ಸಾಯಿಸುಮಾ ಎಂ. ನಾವಡ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಭಾನುವಾರ ನೆರವೇರಿತು.

ಬಂಟ್ವಾಳ: ಜೆಸಿಐ ಮಡಂತ್ಯಾರಿನ 36 ನೇ ಅಧ್ಯಕ್ಷೆಯಾಗಿ ಹಾಗೂ ದ್ವಿತೀಯ ಮಹಿಳಾ ಅಧ್ಯಕ್ಷೆಯಾಗಿ ಜೇಸಿ ಸಾಯಿಸುಮಾ ಎಂ. ನಾವಡ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಭಾನುವಾರ ಮಡಂತ್ಯಾರಿನ ಗಣಪತಿ ಮಂಟಪದಲ್ಲಿ ನಡೆಯಿತು.ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತ, ವಲಯ 15 ರ ಅಧ್ಯಕ್ಷ ಜೆ.ಎಫ್.ಎಫ್. ಸಂತೋಷ ಶೆಟ್ಟಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ನ್ಯಾಯವಾದಿ ಸುರೇಶ್ ಕುಮಾರ್ ಬಿ. ನಾವೂರು ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷ ಡಾ. ಹರ್ಷ ಸಂಪಿಗೆತ್ತಾಯ ಹಾಗೂ ಜೆಸಿಐ ಭಾರತ, ವಲಯ 15, ನಂದಿನಿ(ಪ್ರಾಂತ್ಯ ಎ) ಯ ಉಪಾಧ್ಯಕ್ಷ ಜೆ.ಎಫ್.ಎಮ್. ಅರುಣ್ ಮಾಂಜ ಉಪಸ್ಥಿತಿ ಕಾರ್ಯಕ್ರಮ ಸಂಪನ್ನಗೊಂಡಿತು.

ನಿಕಟಪೂರ್ವ ಅಧ್ಯಕ್ಷ ಜೇಸಿ ಅಮಿತಾ ಅಶೋಕ್, ಪೂರ್ವಾಧ್ಯಕ್ಷ ವಿಕೇಶ್ ಮಾನ್ಯ, ಕಾರ್ಯದರ್ಶಿ ಯತೀಶ್ ರೈ ಹಾಗೂ ಯುವ ಜೇಸಿ ಅಧ್ಯಕ್ಷ ಕೃಪಾಲ್ ಉಪಸ್ಥಿತರಿದ್ದರು. ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು , ಸದಸ್ಯರು, ಅನೇಕ ಗಣ್ಯರು ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.