ಸಾರಾಂಶ
ಪ್ರೇಮಿಗಳ ದಿನದಂದು ನಿಷೇಧಿತ ಪ್ಲಾಸ್ಟಿಕ್ ಗುಲಾಬಿ ಹೂ ಮಾರಾಟ ಮಾಡುತ್ತಿದ್ದವರಿಗೆ ಬಿಬಿಎಂಪಿ ದಂಡ ವಿಧಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು‘ಪ್ರೇಮಿಗಳ ದಿನ’ದಂದು ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಅಧಿಕಾರಿ, ಸಿಬ್ಬಂದಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ₹2.46 ಲಕ್ಷ ದಂಡ ವಿಧಿಸಿದ್ದಾರೆ.ಮಂಗಳವಾರ ಮತ್ತು ಬುಧವಾರ ನಗರದ ಹೂ, ಹೂ ಗುಚ್ಛ ಮಾರಾಟ ಮಳಿಗೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸದ ಕಾರಣ ಫೆ,13ರ ಮಂಗಳವಾರ 290 ಮಳಿಗೆ ಮಾಲೀಕರಿಗೆ ₹78 ಸಾವಿರ ದಂಡ ವಿಧಿಸಿದ್ದಾರೆ. ಫೆ.14ರ ಬುಧವಾರ 669 ಹೂವಿನ ಅಂಗಡಿ ಮಾಲೀಕರಿಗೆ ₹1,68,200 ದಂಡ ವಿಧಿಸಲಾಗಿದೆ. ಎರಡು ದಿನದಲ್ಲಿ 959 ವ್ಯಾಪಾರಿಗಳಿಗೆ ₹2,46,200 ದಂಡ ವಿಧಿಸಲಾಗಿದೆ. ಇದೇ ವೇಳೆ ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸಲು ಮಾರಾಟಗಾರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಬಾಕ್ಸ್‌ವಲಯವಾರು ವಿವರವಲಯಮಳಿಗೆ ಸಂಖ್ಯೆದಂಡ (₹)ಪೂರ್ವ23555,900ಪಶ್ಚಿಮ14033,900ದಕ್ಷಿಣ27059,500ಮಹದೇವಪುರ12332,600ಆರ್‌ಆರ್ ನಗರ10638,800ಯಲಹಂಕ4914,600ದಾಸರಹಳ್ಳಿ184,500ಬೊಮ್ಮನಹಳ್ಳಿ236,400ಒಟ್ಟು9592,46,200