ಸಾರಾಂಶ
ಆಧ್ಯಾತ್ಮಿಕ ಮಾರ್ಗ ದರ್ಶಕರಾಗಿ ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಕಲ್ಪಿಸಿದವರಿಗೆ ಗುರುವಂದನೆ ಸಲ್ಲಿಸುತ್ತೇವೆ ಎಂದು ಮಲೆ ಮಾದೇಶ್ವರ ಬೇಡ ಗುಂಪಣ್ಣ ಸಮುದಾಯದ ಹಿರಿಯ ಮುಖಂಡ ಮುರುಗ ತಿಳಿಸಿದರು. ಹನೂರಿನಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಪೂರ್ಣಿಮೆ
ಕನ್ನಡಪ್ರಭ ವಾರ್ತೆ ಹನೂರುಆಧ್ಯಾತ್ಮಿಕ ಮಾರ್ಗ ದರ್ಶಕರಾಗಿ ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಕಲ್ಪಿಸಿದವರಿಗೆ ಗುರುವಂದನೆ ಸಲ್ಲಿಸುತ್ತೇವೆ ಎಂದು ಮಲೆ ಮಾದೇಶ್ವರ ಬೇಡ ಗುಂಪಣ್ಣ ಸಮುದಾಯದ ಹಿರಿಯ ಮುಖಂಡ ಮುರುಗ ತಿಳಿಸಿದರು..
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಾಲೂರು ಮಹಾನ್ ಮಠದ ಹಿರಿಯ ಗುರುಸ್ವಾಮಿಗಳ ಭೇಟಿ ಮಾಡಿ ಗುರುಪೂರ್ಣಿಮೆ ದಿನ ಗುರುಗಳ ಆಶೀರ್ವಾದ ಪಡೆದು ಮಾತನಾಡಿದರು.ಮಲೆ ಮಾದೇಶ್ವರ ಬೆಟ್ಟದ ಗುರುಸ್ವಾಮಿಗಳ ಹಾಗೂ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಆಶೀರ್ವಾದದಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಅವರು ನಡೆಸಿದ ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಕಲ್ಪಿಸಿರುವ ಅವರಿಗೆ ಕಾರ್ಯಕ್ರಮದ ದಿನದಂದು ಅವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದಿರುವುದು ನಮ್ಮ ನಿಮ್ಮೆಲ್ಲರಿಗೂ ಶ್ರೀಗಳ ಆಶೀರ್ವಾದ ಹಾಗೂ ಮೌಲ್ಯ ಮತ್ತು ನಂಬಿಕೆಯ ವ್ಯವಸ್ಥೆಯನ್ನು ಜೀವನದಲ್ಲಿ ಸರಿಯಾದ ಹಾದಿಯಲ್ಲಿ ನಡೆಯಲು ಗುರುಗಳಿಂದ ಕಲಿತ ಅನೇಕ ಬೋಧನೆಗಳಿಂದ ಇಂದು ಅವರೇ ಹಾಕಿಕೊಟ್ಟ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಲೂರು ಬ್ರಾಹ್ಮತದ ಕಿರಿಯ ಸ್ವಾಮೀಜಿ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಭೇಟಿ ಮಾಡಿ ಗುರುಗಳಿಗೂ ನಮಸ್ಕರಿಸಿ ಆಶೀರ್ವಾದ ಪಡೆದರು.ಬೇಡರ ಸಮುದಾಯದ ಹಿರಿಯ ಮುಖಂಡ ನಿವೃತ್ತ ಶಿಕ್ಷಕ ಪುಟ್ಟಣ್ಣ ಹಾಗೂ ಮತ್ತೊಬ್ಬ ಮುಖಂಡ ಪುರಾಣಿ ಮಹೇಶ್ ಇತರರು ಇದ್ದರು.