ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾಸಮ್ಮೇಳನ ಫೆ.4ರಿಂದ 8ರವರೆಗೆ ಕಾಸರಗೋಡಿನ ಕುಣಿಯದಲ್ಲಿ ನಡೆಯಲಿದೆ.

ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾಸಮ್ಮೇಳನ ಫೆ.4ರಿಂದ 8ರವರೆಗೆ ಕಾಸರಗೋಡಿನ ಕುಣಿಯದಲ್ಲಿ ನಡೆಯಲಿದೆ. ಸಮಾರೋಪಕ್ಕೆ ಕರ್ನಾಟಕ, ಕೇರಳ, ತಮಿಳುನಾಡು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಮಿತಿ ಸದಸ್ಯ ಬಿ.ಕೆ.ಅಬ್ದುಲ್ ಖಾದರ್ ಬಂಬ್ರಾಣ, ಫೆ.3ರಂದು ಕೋಝಿಕ್ಕೋಡ್‌ನ ವರಕ್ಕಲ್ ಮಖಾಮ್‌ನಲ್ಲಿ ಝಿಯಾರತ್, ಫೆ.4ರಂದು ತಳಂಗರೆಯಲ್ಲಿ 100 ಧ್ವಜಾರೋಹಣ ಮೂಲಕ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಸದರಾರ ಕೆ.ಸಿ. ವೇಣುಗೋಪಾಲ್, ಎಂ.ಪಿ. ಅಬುಸ್ಸಮದ್ ಸಮದಾನಿ, ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್, ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕರಾದ ರಮೇಶ್ ಚೆನ್ನಿತ್ತಾಲ, ಪಿ.ಅಬ್ದುಲ್ ಹಮೀದ್, ಕುರುಕ್ಕೋಳಿ ಮೊಯ್ಲಿನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.ಮೂವರು ಸಿಎಂಗಳು ಭಾಗಿ:

ಫೆ.8ರಂದು ಸಂಜೆ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಕರ್ನಾಟಕ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಸ್ತದ ಕೇಂದ್ರ ಸಮಿತಿ ಸದಸ್ಯ ಉಸ್ಮಾನುಲ್ ಫೈಝಿ ತೋಡಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ. ಅನೀಸ್ ಕೌಸರಿ, ಕೋಶಾಕಾರಿ ಸಯ್ಯದ್ ಅಮೀರ್ ತಂಙಳ್ ಕಿನ್ಯ, ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇದ್ದರು.ಗಿನ್ನೆಸ್‌ ದಾಖಲೆಗೆ ಅಧ್ಯಯನ ಶಿಬಿರಸಮ್ಮೇಳನದಲ್ಲಿ ನಡೆಯಲಿರುವ ಅಧ್ಯಯನ ಶಿಬಿರಗಳಲ್ಲಿ 33,313 ಮಂದಿ ಭಾಗವಹಿಸಲಿದ್ದು, ಇದು ಗಿನ್ನೆಸ್ ದಾಖಲೆ ಸೃಷ್ಟಿ ಮಾಡಲಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಎಲ್ಲೂ ಅಧ್ಯಯನ ಶಿಬಿರ ಈವರೆಗೆ ನಡೆದಿಲ್ಲ ಎಂದು ಅಬ್ದುಲ್ ಖಾದರ್ ಬಂಬ್ರಾಣ ತಿಳಿಸಿದರು.