ಸಾರಾಂಶ
ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹುಲಿಕೆರೆ ಗ್ರಾಮದ ಎಚ್.ಪಿ. ಸಂಪತ್ ಕುಮಾರ್, ಉಪಾಧ್ಯಕ್ಷರಾಗಿ ಎನ್. ಎಚ್. ಚಂದ್ರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಎಚ್ ಪಿ ಸಂಪತ್ ಕುಮಾರ್ ಅವರು ಮಾತನಾಡಿ, ಎಲ್ಲಾ ನಿರ್ದೇಶಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಹೆಚ್ಚು ಲಾಭಗಳಿಸಲು ಹೆಚ್ಚು ಶ್ರಮಿಸಿ ರೈತರ ಅನುಕೂಲಕ್ಕೆ ಸಹಕರಿಸುವುದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಈ ಭಾಗದ ಹೆಚ್ಚಿನ ರೈತರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಸಾಲ ವಿತರಣೆಗೆ ಶಾಸಕರ ಸಹಕಾರ ಕೋರುವುದಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹುಲಿಕೆರೆ ಗ್ರಾಮದ ಎಚ್.ಪಿ. ಸಂಪತ್ ಕುಮಾರ್, ಉಪಾಧ್ಯಕ್ಷರಾಗಿ ಎನ್. ಎಚ್. ಚಂದ್ರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್. ಬಿ. ರಂಗಸ್ವಾಮಿ ಹಾಗೂ ಉಪಾಧ್ಯಕ್ಷರಾಗಿದ್ದ ಮಾಯಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಚ್.ಪಿ. ಸಂಪತ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಎನ್ಎಚ್. ಚಂದ್ರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಲೀಲಾ ಅವಿರೋಧ ಆಯ್ಕೆ ಪ್ರಕಟಿಸಿದರು. ನೂತನ ಅಧ್ಯಕ್ಷ ಎಚ್ ಪಿ ಸಂಪತ್ ಕುಮಾರ್ ಅವರು ಮಾತನಾಡಿ, ಎಲ್ಲಾ ನಿರ್ದೇಶಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಹೆಚ್ಚು ಲಾಭಗಳಿಸಲು ಹೆಚ್ಚು ಶ್ರಮಿಸಿ ರೈತರ ಅನುಕೂಲಕ್ಕೆ ಸಹಕರಿಸುವುದಾಗಿ ತಿಳಿಸಿದರು.
ಶಾಸಕರ ಸಹಕಾರದಿಂದ ಕೃಷಿ ಪತ್ತಿನ ಷೇರುದಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅವರ ಸಲಹೆ ಸಹಕಾರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರ ಒಮ್ಮತದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಈ ಭಾಗದ ಹೆಚ್ಚಿನ ರೈತರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಹೆಚ್ಚಿನ ಸಾಲ ವಿತರಣೆಗೆ ಶಾಸಕರ ಸಹಕಾರ ಕೋರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಪತ್ತಿನ ನಿರ್ದೇಶಕರುಗಳಾದ ಬಿ. ಆರ್. ದೊರೆಸ್ವಾಮಿ, ಪಟೇಲ್ ಕುಮಾರ್, ವಿಕ್ಟರ್, ಗೌರಮ್ಮ ತೋಪೇಗೌಡ, ಪ್ರಕಾಶ್, ಕೋಮಲ ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಆಶಾದೇವಿ ಪ್ರಕಾಶ್, ಮುಖಂಡರಾದ ತೋಟಿ ನಾಗರಾಜು, ಎಚ್. ಎಂ. ನಟರಾಜು, ಬೆಳಗೀಹಳ್ಳಿ ಪುಟ್ಟಸ್ವಾಮಿ, ಉದ್ಯಮಿ ಭುವನಹಳ್ಳಿ ಯೋಗೀಶ್, ಎನ್. ಆರ್. ಶಿವಕುಮಾರ್, ಹೊನ್ನೇಗೌಡ, ಮಹಮ್ಮದ್ ಜಾವೀದ್, ಗುಂಡಣ್ಣ, ಎನ್ಎಸ್, ಮಂಜುನಾಥ್, ಲಕ್ಷ್ಮೀದೇವಿ ಜಯರಾಮ್, ಯುವ ಮುಖಂಡ ಜಂಬೂರು ಮಹೇಶ್, ಉದ್ಯಮಿ ಜಯರಾಮ್, ಅತ್ತಿಹಳ್ಳಿ ಹಿರಿಯಣ್ಣ ಗೌಡ, ಜೆ. ಡಿ. ಶಂಕರ್, ದೊಡ್ಡ ಗನ್ನಿ ಸತೀಶ್, ಹೊಂಗೆಹಳ್ಳಿ ಮಂಜೇಗೌಡ, ರಾಮಕೃಷ್ಣ, ಶಂಕ್ರಣ್ಣ, ಶೇಖರ್, ಕೃಷ್ಣೇಗೌಡ, ಹುಲಿಕೆರೆ ಚಂದ್ರೇಗೌಡ, ಪ್ರಕಾಶ್, ಹೋಟೆಲ್ ರಾಜಣ್ಣ, ಹೊನ್ನಮ್ಮ ಧರಣಿ ಕುಮಾರ್, ಯುವರಾಜ್, ಅವೇರಳ್ಳಿ ಚಂದ್ರೇಗೌಡ, ಅನಿಲ್ ಕುಮಾರ್, ಜಂಬೂರು ರಮೇಶ್, ಕುಳ್ಳೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್. ಕೆ. ಅಭಿಲಾಷ್, ಕೃಷಿ ಪತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಡಿ. ಸಹಕಾರ್ಯದರ್ಶಿ ರುದ್ರೇಶ್, ಅಟೆಂಡರ್ ನಂಜುಂಡಿ, ಮಂಗಳಮ್ಮ, ಸಹಾಯಕಿ ಕುಮಾರಿ ಇತರರು ಹಾಜರಿದ್ದರು.