ಸಾರಾಂಶ
ಹತ್ಯೆಗೆ ಅಕ್ರಮ ಸಂಬಂಧವೇ ಪ್ರಮುಖ ಕಾರಣ ಎನ್ನಲಾಗಿದ್ದು, ಕೇಸಿಗೆ ಸಂಬಂಧಿಸಿದಂತೆ ಹಾನಗಲ್ ಗ್ರಾಮದ ಸಂಗೀತ, ಆಕೆಯ ಪತಿ ಕಿರಣ್ ಮತ್ತು ಚೌಡ್ಲು ಗ್ರಾಮದ ಪಿ.ಎಂ.ಗಣಪತಿ ಅವರು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಕಳೆದ ಶುಕ್ರವಾರದಂದು ನಾಪತ್ತೆಯಾಗಿ ಬುಧವಾರ ಮಾಗೇರಿ ಸಮೀಪದ ಹೊಸಳ್ಳಿ ಮಠದ ಸನಿಹ ದೂರದಲ್ಲೇ ಇದ್ದ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದ ಸೋಮವಾರಪೇಟೆ ಮೂಲದ ಸಂಪತ್ ಎನ್.ಡಿ ಅಲಿಯಾಸ್ ಶಂಭುವನ್ನು ಅಮಾನುಷವಾಗಿ ಕತ್ತಿಯಿಂದ ಕಡಿದು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಗಣಪತಿ (ಗಣಪ) ಎಂಬಾತನನ್ನು ಬೆಳ್ತಂಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹತ್ಯೆಗೆ ಅಕ್ರಮ ಸಂಬಂಧವೇ ಪ್ರಮುಖ ಕಾರಣ ಎನ್ನಲಾಗಿದ್ದು, ಕೇಸಿಗೆ ಸಂಬಂಧಿಸಿದಂತೆ ಹಾನಗಲ್ ಗ್ರಾಮದ ಸಂಗೀತ, ಆಕೆಯ ಪತಿ ಕಿರಣ್ ಮತ್ತು ಚೌಡ್ಲು ಗ್ರಾಮದ ಪಿ.ಎಂ.ಗಣಪತಿ ಅವರು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಂಪತ್‌ನನ್ನು ಕೊಲೆ ಮಾಡಿ ಯಸಳೂರು ಠಾಣಾ ವ್ಯಾಪ್ತಿಯಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದಾರೆ. ಅಲ್ಲದೇ 2023ರ ಮೇ ತಿಂಗಳಲ್ಲಿ ಆರೋಪಿ ಸಂಗೀತ ಮತ್ತು ಆಕೆಯ ಪುತ್ರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಮೃತ ಸಂಪತ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.