ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ದಳವಾಯಿ ಕೋಡಿಹಳ್ಳಿಯ ಬಸವೇಶ್ವರ ದೇವಸ್ಥಾನದ ಸಂಪ್ರೋಕ್ಷಣ ಕಾರ್ಯಕ್ರಮ ಎರಡು ದಿನಗಳ ಕಾಲ ಭಕ್ತಿಪೂರಕವಾಗಿ ನೆರವೇರಿತು.ಗಂಗಾಪೂಜೆ ಗೋ ಪೂಜೆ ಮುಖಾಂತರ ಕೃಷ್ಣ ರುಕ್ಮಿಣಿ ದೇವಸ್ಥಾನದಿಂದ ಪೂರ್ಣಕುಂಭದೊಡನೆ ಮುತ್ತೈದೆಯರ ಜೊತೆ ವೀರಗಾಸೆ, ತಮಟೆ, ನಗಾರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯ ಪ್ರವೇಶಿಸಿ ಪುಣ್ಯ ಪಂಚ ಗವ್ಯ, ಪಂಚ ಕಳಶ, ನವಗ್ರಹ, ಅಷ್ಟದಿಕ್ಪಾಲಕ, ವಾಸ್ತು ಪೂಜೆ, ಉಮಾ ಮಹೇಶ್ವರ ಪೂಜೆ, ಮಂಡಲರಾಧನೆ, ಮೃತ್ಯುಂಜಯ ಪೂಜೆ, ಶಿವ ಪರಿವಾರ ಪೂಜೆ ಮತ್ತು ಆವಾಹಿತ ಸರ್ವದೇವ ಹೋಮ ಪೂಜೆ ನೆರವೇರಿಸಲಾಯಿತು.
ಬಸವೇಶ್ವರ ಸ್ವಾಮಿಗೆ ಕುಂಭಾಭಿಷೇಕ, ಗೋಪುರ ಕುಂಭಾಭಿಷೇಕ, ಅಷ್ಟೋತ್ತರ, ಅಭಿಷೇಕ, ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗವನ್ನು ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.ರಾಮಲಿಂಗೇಶ್ವರ ಮಠ ಯಡವಾಣಿ ಅಮೃತೂರು ಬಸವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬಸವೇಶ್ವರ ಮೂರ್ತಿಗೆ ಹಾಗೂ ಕಳಸಕ್ಕೆ ತೀರ್ಥ ಪ್ರೋಕ್ಷಣ , ಹೋಮ ಹವನ ನಡೆಸಿದ್ದೀರಿ. ದೇವರ ಆರಾಧನೆ ಎನ್ನುವುದು ಮನೆಗಳಲ್ಲಿ, ಮನಸ್ಸಿನಲ್ಲಿ ಭಕ್ತಿಯ ವೈಭವದ ಭಾವನೆಗಳನ್ನು ತುಂಬಲಿದೆ ಎಂದರು.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಹಕರಿಸಿದ ದಾನಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಪೂಜೆ ಪುನಸ್ಕಾರಗಳು ಮುಗಿದ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತುಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ರಾಮನಗರ ಶ್ರೀಅನ್ನದಾನ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಪೂರಿಗಾಲಿ, ಗ್ರಾಪಂ ಅಧ್ಯಕ್ಷೆ ಪಾರ್ವತಿ. ಗ್ರಾಮಸ್ಥರಾದ ಶಿವ ಕೆಂಚೇಗೌಡ, ಕುಮಾರ್ (ಎವಿಟಿ), ಪ್ರಧಾನ ಅರ್ಚಕರಾದ ಶಿವಸ್ವಾಮಿ, ಬಸವಲಿಂಗ, ಗೂಳಿಗೌಡ, ಸಿದ್ದಲಿಂಗ ಸ್ವಾಮಿ, ಶಿವಸ್ವಾಮಿ, ಶಿವರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.