ಸಂಯುಕ್ತಾ ಪಾಟೀಲಗೆ ರಾಜಕೀಯದಲ್ಲಿ ಭವಿಷ್ಯವಿದೆ

| Published : Jul 19 2024, 01:09 AM IST

ಸಂಯುಕ್ತಾ ಪಾಟೀಲಗೆ ರಾಜಕೀಯದಲ್ಲಿ ಭವಿಷ್ಯವಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಅವರು ಸನ್ಮಾನಿಸಿ ಗೌರವಿಸಿರುವುದು ಹರ್ಷವನ್ನುಂಟು ಮಾಡಿದೆ. ಮುಂದೊಂದು ದಿನ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಅವರು ಸನ್ಮಾನಿಸಿ ಗೌರವಿಸಿರುವುದು ಹರ್ಷವನ್ನುಂಟು ಮಾಡಿದೆ. ಮುಂದೊಂದು ದಿನ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.ವಿಜಯಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಅವರು ಶ್ರೀ ಖಾಸ್ಗತೇಶ್ವರ ಶ್ರೀಮಠಕ್ಕೆ ಆಗಮಿಸಿ ಶ್ರೀಗಳಿಗೆ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದ್ದು, ಸಂಯುಕ್ತಾ ಪಾಟೀಲ ಅವರ ಮನೆತನದ ಇತಿಹಾಸವನ್ನು ಶ್ರೀಗಳು ವಿವರಿಸಿದರು. ಸಚಿವ ಶಿವಾನಂದ ಪಾಟೀಲರೂ ಕೂಡಾ ಶ್ರೀ ಖಾಸ್ಗತೇಶ್ವರ ಮಠದೊಂದಿಗೆ ಹಾಗೂ ಈ ಹಿಂದಿನ ಪೀಠಾಧಿಪತಿಗಳಾದ ಲಿಂ.ವಿರಕ್ತ ಮಹಾಸ್ವಾಮಿಗಳ ಜೊತೆ ಉತ್ತಮ ಒಡನಾಟವಿದೆ. ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಆಧ್ಯಾತ್ಮದ ಅಭಿರುಚಿಯನ್ನು ಭಕ್ತ ಸಮೂಹಕ್ಕೆ ಉಣಬಡಿಸಿದ್ದಾರೆ ಹೊರತು ರಾಜಕೀಯ ವಿಚಾರ ರಾಜಕೀಯ ಕುರಿತು ಅವರು ಎಂದೂ ಮಾತಾಡಿಲ್ಲ. ಮಠಗಳ ಪರಂಪರೆ ಕುರಿತು ಅವರಿಗೆ ಬಹಳೇ ಗೌರವವಿದೆ. ಸಹೋದರಿ ಸಂಯುಕ್ತಾ ಪಾಟೀಲ ಕೂಡಾ ಆಧ್ಯಾತ್ಮದ ವಿಚಾರದೊಂದಿಗೆ ಗುರು ಹಿರಿಯರೆಂದು ನಂಬಿಕೆ ಇಟ್ಟು ಮುನ್ನಡೆದಿರುವದು ಸಂತಸದ ಸಂಗತಿ ಎಂದರು.ಸಂಯುಕ್ತಾ ಪಾಟೀಲರು ಕೂಡ ಜಾತ್ರೋತ್ಸವ ಕುರಿತು ತಮ್ಮದೇ ಕಾಣಿಕೆ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಸಚಿವರು ಅಧಿವೇಶನದಲ್ಲಿರುವುದರಿಂದ ಶ್ರೀಮಠಕ್ಕೆ ಬರಲು ಆಗಿಲ್ಲ. ಮಠಕ್ಕೆ ಹೋಗಿ ಶ್ರೀಗಳ ಆಶಿರ್ವಾದ ಪಡೆದುಕೊಳ್ಳಲು ತಿಳಿಸಿದ್ದಾಗಿ ಹೇಳಿದರು. ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಮುಖಂಡರಾದ ಮಡುಸಾಹುಕಾರ ಬಿರಾದಾರ, ರಘುಸಿಂಗ್ ಹಜೆರಿ, ಬಸವರಾಜ ಕುಂಬಾರ, ವಿರೇಶ ಕಾರಗನೂರ, ಬಸು ಮಾಲಿಪಾಟೀಲ, ರಾಮು ಗುತ್ತಿಹಾಳ, ಭಕ್ತರು ಮುಂತಾದವರು ಹಾಜರಿದ್ದರು.