ಶಾಸ್ತ್ರೀಯ ಸಂಗೀತ, ನೃತ್ಯ ಉಳಿಸಿದರೆ ಸನಾತನ ಧರ್ಮವು ಉಳಿದೀತು: ಪುತ್ತಿಗೆ ಶ್ರೀ

| Published : Mar 17 2024, 02:05 AM IST

ಶಾಸ್ತ್ರೀಯ ಸಂಗೀತ, ನೃತ್ಯ ಉಳಿಸಿದರೆ ಸನಾತನ ಧರ್ಮವು ಉಳಿದೀತು: ಪುತ್ತಿಗೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಿ ಕೃಷ್ಣ ಮಠದಲ್ಲಿ ನಡೆಸಲಾಗುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶನಿವಾರ ಉದ್ಘಾಟಿಸಿದರು. ಮಣಿಪಾಲದ ವಿಪಂಚಿ ಬಳಗದ ವಿದುಷಿ ಪವನ ಬಿ. ಆಚಾರ್ಯರು ಮತ್ತು ತಂಡದ ಸದಸ್ಯರಿಂದ ಪಂಚ ವೀಣಾ ವಾದ್ಯ ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಬೆಂಗಳೂರಿನ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ವತಿಯಿಂದ ಶ್ರಿ ಕೃಷ್ಣ ಮಠದಲ್ಲಿ ನಡೆಸಲಾಗುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶನಿವಾರ ಉದ್ಘಾಟಿಸಿದರು.ನಂತರ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಭಾರತೀಯ ಕಲಾ ಸಂಪತ್ತನ್ನು ರಕ್ಷಿಸಿ, ಅದನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದು ಕೂಡ ಭಗವಂತನ ಸೇವೆಯೇ ಎಂಬುದಾಗಿ ತಿಳಿಸಿದರಲ್ಲದೇ, ಹಿಂದೂ ಧರ್ಮದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕಲೆಗಳನ್ನು ಉಳಿಸಿ ಬೆಳೆಸಿದರೆ ಸನಾತನ ಧರ್ಮವು ಉಳಿದೀತು ಎಂದರು.ಕಲಾವಿದರ ಒಕ್ಕೂಟದ ರಾಜ್ಯ ಅಧ್ಯಕ್ಷರು ಸಾಯಿ ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು. ಕಾರ್ಯಕ್ರಮದ ಸಂಚಾಲಕ ಶ್ರೀ ಮಠದ ರಮೇಶ್ ಭಟ್ ಸ್ವಾಗತಿಸಿ, ವಂದಿಸಿದರು.ನಂತರ ಮಣಿಪಾಲದ ವಿಪಂಚಿ ಬಳಗದ ವಿದುಷಿ ಪವನ ಬಿ. ಆಚಾರ್ಯರು ಮತ್ತು ತಂಡದ ಸದಸ್ಯರಿಂದ ಪಂಚ ವೀಣಾ ವಾದ್ಯ ಪ್ರಸ್ತುತಪಡಿಸಿದರು.ಗುಜರಾತ್ ಭಕ್ತರಿಗೆ ಗೀತಾದೀಕ್ಷೆಶನಿವಾರ ಗುಜರಾತ್ ರಾಜ್ಯದಿಂದ ಭಾಗವತ ಪ್ರವಚನ ಚತುರರಾದ ಶರತ್ ಭಾಯಿ ಅವರ ನೇತೃತ್ವ ಸುಮಾರು 250ಕ್ಕೂ ಹೆಚ್ಚು ಭಕ್ತರು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರು. ಅವರಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಭಗವದ್ಗೀತಾ ಲೇಖನ ಯಜ್ಞ ದೀಕ್ಷೆ ನೀಡಿದರು.