ಪ್ರಜಾಪ್ರಭುತ್ವದಿಂದ ಪಾವಿತ್ರ್ಯಹೆಚ್ಚಳ

| Published : Sep 17 2024, 12:53 AM IST

ಸಾರಾಂಶ

ಪ್ರಜಾಪ್ರಭುತ್ವದಿಂದ ಪಾವಿತ್ರ್ಯಹೆಚ್ಚಳ

ತಿಪಟೂರು: ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಯು ಅರಿತು, ಜೀವನದಲ್ಲಿ ಮೈಗೂಡಿಸಿಕೊಂಡರೆ ಮಾತ್ರ ಅದರ ಪಾವಿತ್ರ್ಯತೆ ಹೆಚ್ಚಲಿದೆ ಎಂದು ನಗರದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.

ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಸೂತ್ರವಾದ ಆಡಳಿತಕ್ಕಾಗಿ ಡಾ. ಬಿ.ಆರ್. ಅಂಬೇಡ್ಕ್‌ರವರು ಸಂವಿಧಾನವನ್ನು ರಚಿಸಿಕೊಟ್ಟರು. ಅಂದಿನ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆ, ಸಹೋದರತ್ವ, ವಿಶ್ವಬ್ರಾತೃತ್ವ, ಮಾನವೀಯ ಮೌಲ್ಯಗಳಿದ್ದವು. ದೇಶದಲ್ಲಿ ಶಾಂತಿ, ನೆಮ್ಮದಿ, ಭಾತೃತ್ವ ಭಾವನೆಗಳನ್ನು ಪ್ರತಿಪಾದಿಸಲು ಸರ್ಕಾರ ಮಾನವ ಸರಪಳಿಯಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ದೇಶ, ಧರ್ಮ, ಭಾಷೆಯ ನೆಲ, ಜಲ, ಸಂಸ್ಕೃತಿ, ಜನಾಂಗಗಳ ಸರ್ವಾಂಗೀಣ ಅಭಿವೃದ್ದಿಗಾಗಿ ರಾಷ್ಟ್ರಾಭಿಮಾನವನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕೆಂದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳಾದ ವಿಜಯಕುಮಾರಿ, ವಿಜಯಕುಮಾರ್, ಉಪನ್ಯಾಸಕರಾದ ನಾಗರಾಜು, ಜಗದೀಶ್, ಶಿಕ್ಷಕರುಗಳಾದ ಸಿದ್ದೇಶ್, ಸಂತೋಷ್, ವೆಂಕಟೇಶ್, ಬಸವರಾಜು, ಪದ್ಮ, ಬಿಂದು ಹಾಗೂ ವಿದ್ಯಾರ್ಥಿಗಳು ಮಾನವ ಸರಪಳಿ ಮೂಲಕ ಕಾರ್ಯಕ್ರಮ ಆಚರಿಸಲಾಯಿತು.