ಸಾರಾಂಶ
ಕದೀಮರಿಂದ 1.50 ಲಕ್ಷ ರು. ಮೌಲ್ಯದ ಶ್ರೀಗಂಧದ ತುಂಡು, ಮೂರು ಬೈಕ್ ವಶಕನ್ನಡಪ್ರಭ ವಾರ್ತೆ ಹೊಸನಗರ
ಶ್ರೀಗಂಧ ಮರಗಳ ಅಕ್ರಮ ಕಡಿತಲೆ, ಸಾಗಾಣಿಕೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ಗುರುವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಜನ ಶ್ರೀಗಂಧ ಕಳ್ಳರು, ಮೂರು ಮೋಟಾರ್ ಬೈಕ್‍ಗಳನ್ನು ಹೊಸನಗರ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.ಖಚಿತ ಮಾಹಿತಿ ಮೇರೆಗೆ ಗುರುವಾರ ತಾಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ₹1.50 ಲಕ್ಷ ಮೌಲ್ಯದ ಒಟ್ಟು 39.240 ಕೆ.ಜಿ ಶ್ರೀಗಂಧದ ತುಂಡುಗಳ ಜೊತೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‍ಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳಾದ ಸುಳ್ಯದ ಅಬ್ದುಲ್ ಖಾದರ್, ಹುಂಚದ ಬಿಲ್ಲೇಶ್ವರ ವಿಜಯ್ ಶೆಟ್ಟಿ, ಯೋಗೇಂದ್ರ ಕಾರ್ಗಲ್, ಮಂಜುನಾಥ ಕಾರ್ಗಲ್ ಹಾಗೂ ಪ್ರಭಾಕರ್, ಹನೀಫ್ ವಿರುದ್ಧ ಅರಣ್ಯ ಇಲಾಖೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಎಂ.ರಾಘವೇಂದ್ರ ಹಾಗೂ ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್. ಸಂಜಯ್, ಉಪ ವಲಯ ಅರಣ್ಯಾಧಿಕಾರಿಗಳಾದ ಷಣ್ಮುಖ ಪಟೇಲ್, ಹಾಲೇಶ್ ಕುಮಾರ್, ದೊಡ್ಮನಿ, ಯುವರಾಜ್, ಅನಿಲ್, ಮಂಜುನಾಥ್, ಅಕ್ಷಯ್, ನರೇಂದ್ರ, ಸತೀಶ್ ನಿಟ್ಟೂರು, ಮನೋಜ್ ಮೌನೇಶ್, ಇರ್ಷದ್, ಸಿಬ್ಬಂದಿಯಾದ ಪುಟ್ಟಸ್ವಾಮಿ, ರಾಜು, ಶಶಿಕುಮಾರ್, ಜಸ್ಸಿ ಲಾಯ್ಡ್, ರಮೇಶ್, ದಿವಾಕರ್, ಸುರೇಶ್, ಕೃಷ್ಣಮೂರ್ತಿ, ವಾಹನ ಚಾಲಕರಾದ ಜಗದೀಶ್, ಪ್ರಮೋದ್, ರಾಮುಗಾಣಿಗ ಇದ್ದರು.
- - -15ಎಚ್‍ಒಎಸ್1ಪಿ:
ಬೈಕ್ ಸಹಿತ ಶ್ರೀಗಂಧ ಚೋರರನ್ನು ವಶಕ್ಕೆ ಪಡೆದ ಹೊಸನಗರ ಅರಣ್ಯ ಇಲಾಖೆ ಸಿಬ್ಬಂದಿ.