ಸಾರಾಂಶ
ಬೀಳಗಿ: ತಾಲೂಕಿನ ಗಿರಿಸಾಗರ ಗ್ರಾಮದ ಕಲ್ಯಾಣ ಹಿರೇಮಠದ ಮಹಾತಪಸ್ವಿ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ, ಲಿಂ.ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ನೂತನ ಶಿಲಾ ಮಂದಿರ ಲೋಕಾರ್ಪಣೆ, ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಭಾವೈಕ್ಯ ಧರ್ಮಸಮ್ಮೇಳನ ಕಾರ್ಯಕ್ರಮ ಮೇ 7 ಮತ್ತು 8ರಂದು ನಡೆಯಲಿವೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
7ರಂದು ಸಂಜೆ 7 ಗಂಟೆಗೆ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರ 31ನೇ ವರ್ಧಂತಿ ಮಹೋತ್ಸವ, ಪ್ರವಚನ ಮಂಗಲ ಹಾಗೂ ಗೌರವ ಶ್ರೀರಕ್ಷೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ಡಾ.ಮುರುಗೇಶ ನಿರಾಣಿ ಉದ್ಘಾಟಿಸುವರು.ವಿಮಲರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ನಾಡಿನ ಹಲವು ಶ್ರೀಗಳು ನೇತೃತ್ವ ವಹಿಸುವರು. ನಾಗಯ್ಯ ಶಾಸ್ತ್ರಿಗಳಿಂದ ಪ್ರವಚನ ಮಂಗಲ. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ ಅಧ್ಯಕ್ಷತೆ ವಹಿಸುವರು. ಗಣ್ಯರು ಭಾಗವಹಿಸುವರು.8ರಂದು ಬೆಳಗ್ಗೆ 8 ಗಂಟೆಗೆ ನಾನಾಸಾಹೇಬ ದೇಸಾಯಿ ಜಂಗಮ ವಟುಗಳ ಅಯ್ಯಾಚಾರ, ಧರ್ಮ ಧ್ವಜಾರೋಹಣ, ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 12 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉಜ್ಜಯನಿ ಮಹಾಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗುವುದು. ನಂತರ ನಡೆಯುವ ಸರ್ವಧರ್ಮ ಸಾಮೂಹಿಕ ವಿವಾಹ, ಭಾವೈಕ್ಯ ಸಮ್ಮೇಳನದ ಸಾನಿಧ್ಯವನ್ನು ಉಜ್ಜಯಿನಿ ಜಗದ್ಗುರುಗಳು ವಹಿಸುವರು. ವಿವಿಧ ಶ್ರೀಗಳು ನೇತೃತ್ವ, ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ ಉದ್ಘಾಟಿಸಲಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾಜಿ ಸಚಿವ ಎಸ್.ಆರ್. ಪಾಟೀಲ ಗರ್ಭಗುಡಿ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಚ್. ಆರ್. ನಿರಾಣಿ ಕರ್ತೃ ಗದ್ದುಗೆ ಮುಖ ಮಂಟಪ ಉದ್ಘಾಟಿಸುವರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಹಾದ್ವಾರ ಉದ್ಘಾಟಿಸುವರು. ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡುವರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಚ್. ವೈ. ಮೇಟಿ ಮತ್ತಿತರ ಗಣ್ಯರಿಗೆ ಗೌರವ ಶ್ರೀರಕ್ಷೆ ನಡೆಯಲಿದೆ. ಯಾದಗಿರಿ ಮಾರಾಟ ತೆರಿಗೆ ಇಲಾಖೆ ಆಯುಕ್ತ ರಾಮಣ್ಣ ಎಂ. ಗಿರಿಸಾಗರ, ಎಸ್.ವಿ.ವಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಎನ್. ಪಾಟೀಲ, ಭಾಗ್ಯಲಕ್ಷ್ಮೀ ಧಾರವಾಹಿ ನಿರ್ದೇಶಕ ಗೌಡು ದರ್ಶನ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.