ಖಾಸ್ಗತೇಶ್ವರ ಮಠದ ಭರತನಾಟ್ಯ ಶಿಕ್ಷಕ ಸಂಗಯ್ಯ ಇನ್ನಿಲ್ಲ

| Published : Feb 08 2024, 01:33 AM IST

ಖಾಸ್ಗತೇಶ್ವರ ಮಠದ ಭರತನಾಟ್ಯ ಶಿಕ್ಷಕ ಸಂಗಯ್ಯ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಖಾಸ್ಗತೇಶ್ವರ ಮಠದ ಭರತನಾಟ್ಯ ಶಾಲೆಯ ಉಸ್ತುವಾರಿ ಹಾಗೂ ಭರತನಾಟ್ಯ ಶಿಕ್ಷಕ ಸಂಗಯ್ಯ ಶಿವಬಸಯ್ಯ ವಿರಕ್ತಮಠ (58) ಬುಧವಾರ ನಿಧನರಾದರು.

ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಭರತನಾಟ್ಯ ಶಾಲೆಯ ಉಸ್ತುವಾರಿ ಹಾಗೂ ಭರತನಾಟ್ಯ ಶಿಕ್ಷಕ ಸಂಗಯ್ಯ ಶಿವಬಸಯ್ಯ ವಿರಕ್ತಮಠ (58) ಬುಧವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ. ತಾಳಿಕೋಟೆ ಹಾಗೂ ಮುದ್ದೇಬಿಹಾಳದಲ್ಲಿ ಸುಮಾರು ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆ ಕುರಿತು ಶಿಕ್ಷಣ ನೀಡಿದ್ದ ಇವರಿಗೆ ಧಾರವಾಡದಲ್ಲಿ ನಾಟ್ಯ ಮಯೂರಿ ಪ್ರಶಸ್ತಿ ಲಬಿಸಿತ್ತು. ಶ್ರೀ ಖಾಸ್ಗತೇಶ್ವರ ಮಠದ ಸ್ವಂತ ಜಮೀನಿನಲ್ಲಿ ಫೆ.08ರಂದು (ಗುರುವಾರ) ಮಧ್ಯಾಹ್ನ ೨ ಗಂಟೆಗೆ ಅಂತ್ಯಕ್ರಿಯೆ ಜರುಗಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ಮಾಜಿ ಶಾಸಕರಾದ ಸೋಮನಗೌಡ ಪಾಟೀಲ(ಸಾಸನೂರ), ಎ.ಎಸ್.ಪಾಟೀಲ(ನಡಹಳ್ಳಿ), ವೀ.ವಿ.ಸಂಘದ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿವಿಧ ರಾಜಕೀಯ ಮುಖಂಡರುಗಳು ಹಾಗೂ ವಿವಿಧ ಮಠಮಾನ್ಯಗಳ ಶ್ರೀಗಳು ಸಂತಾಪ ಸೂಚಿಸಿದ್ದಾರೆ.