ಕಲಾಮೃತ ಮಂಗಳೂರು ಮತ್ತು ನಮ್ಮ ಕುಡ್ಲ ಇವರ ಜಂಟಿ ಆಶ್ರಯದಲ್ಲಿ ‘ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್- 2026’ ರ ವಿಜೇತ ಮಾ. ಅಶ್ಮಿತ್ ಎ.ಜೆ. ಮತ್ತು ಪ್ರಥಮ ರನ್ನರ್-ಅಪ್ ಮಾ. ಅಚಿಂತ್ಯ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಮಂಗಳೂರು : ಕಲಾಮೃತ ಮಂಗಳೂರು ಮತ್ತು ನಮ್ಮ ಕುಡ್ಲ ಇವರ ಜಂಟಿ ಆಶ್ರಯದಲ್ಲಿ ‘ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್- 2026’ ರ ವಿಜೇತ ಮಾ. ಅಶ್ಮಿತ್ ಎ.ಜೆ. ಮತ್ತು ಪ್ರಥಮ ರನ್ನರ್-ಅಪ್ ಮಾ. ಅಚಿಂತ್ಯ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಲಾಮೃತದ ಅಧ್ಯಕ್ಷ ಪ್ರಶಾಂತ್ ಶೇಟ್, ಗೌರವಾಧ್ಯಕ್ಷ ಮುರಳಿಧರ ಶೆಟ್ಟಿ, ಗೌರವ ಸಲಹೆಗಾರ ಗಣೇಶ ಸೋಮಯಾಜಿ, ಸಂಯೋಜಕ ಎನ್. ದಿಲೀಪ್ ಕುಮಾರ್, ಸಂಚಾಲಕ ಸೋಮಶೇಖರ್, ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಕರ್ಕೇರ ಮತ್ತು ಅತಿಥಿಗಳಾದ ಚಂದ್ರಶೇಖರ್ ಶೆಟ್ಟಿ, ವೇಣುಗೋಪಾಲ ಶ್ಯಾನುಭೋಗ್, ಮೌನೇಶ್ ಚಾವಣಿ ಹಾಗೂ ಕೋಟಿ ಪ್ರಸಾದ್ ಆಳ್ವ ಶುಭ ಹಾರೈಸಿದರು. ವರ್ಷಾ ಪ್ರಾರ್ಥಿಸಿದರು.ಕಲಾಮೃತ ತಂಡದ ಸದಸ್ಯರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.ಬಳಿಕ ನಡೆದ ಸನ್ಮಾನ ಸಮಾರಂಭದಲ್ಲಿ ಖ್ಯಾತ ಕಲಾವಿದ ಡಾ. ದೇವದಾಸ್ ಕಾಪಿಕಾಡು ಮತ್ತು ಭೋಜರಾಜ್ ವಾಮಂಜೂರ್ ಅವರು ಬಾಲ ಪ್ರತಿಭೆಗಳಿಗೆ ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಮಾ. ಅಶ್ಮಿತ್ ಎ.ಜೆ. ಅವರಿಗೆ ‘ಮಂಗಳೂರಿನ ಮಾಣಿಕ್ಯ’ ಹಾಗೂ ಅಚಿಂತ್ಯ ರೈ ಅವರಿಗೆ ‘ಮಂಗಳೂರಿನ ಮುತ್ತು’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.
ಪದ್ಮಜಾ ನಿರೂಪಿಸಿದರು. ಸಂಚಾಲಕ ಸೋಮಶೇಖರ್ ವಂದಿಸಿದರು.