ಸಾರಾಂಶ
ಆತ್ಮ ಗೌರವ ಇದ್ದಲ್ಲಿ ದೇಶ ಭಕ್ತಿಯುಳ್ಳ ಸಂಘ ಪರಿವಾರದವರು ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಬಾರದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ ಹೇಳಿದರು
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ
ಕನ್ನಡಪ್ರಭ ವಾರ್ತೆ, ಕಡೂರುಆತ್ಮ ಗೌರವ ಇದ್ದಲ್ಲಿ ದೇಶ ಭಕ್ತಿಯುಳ್ಳ ಸಂಘ ಪರಿವಾರದವರು ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಬಾರದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ ಹೇಳಿದರು. ಕಡೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಡುತ್ತೇನೆ ಎಂದಿದ್ದರು. ಪ್ರಜ್ವಲ್ ರೇವಣ್ಣನವರೂ ಕೂಡ ಆರ್.ಎಸ್.ಎಸ್. ಬಗ್ಗೆ ತಾತ್ಸಾರದಿಂದ ಮಾತನಾಡಿದ್ದರು. ಈಗ ಅವರೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರು ವುದರಿಂದ ದೇಶಭಕ್ತ ಸಂಘಟನೆಯವರೇ ಪ್ರಜ್ವಲ್ ಪರ ಪ್ರಚಾರ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಹಾಗಾಗಿ ಸಂಘ ಪರಿವಾರದವರು ಆತ್ಮಾಭಿಮಾನವಿದ್ದರೆ ಪ್ರಜ್ವಲ್ ಅವರಿಗೆ ಮತ ಚಲಾಯಿಸಬಾರದು ಎಂದು ಒತ್ತಾಯಿಸಿದರು.
ಕಳೆದ ಎರಡು ವರ್ಷದ ಹಿಂದೆ ಪ್ರಜ್ವಲ್ ಅವರು ಅಫಘಾತದಲ್ಲಿ ನಿಧನರಾದ ನಮ್ಮ ತಾಲೂಕಿನ ಸೋಮನಹಳ್ಳಿ ತಾಂಡ್ಯದ ಬಂಜಾರ ಸಮುದಾಯದ ವಿದ್ಯಾರ್ಥಿನಿ ರಕ್ಷಿತಾ ಬಾಯಿ ಕುಟುಂಬಕ್ಕೆ ಎರಡು ಲಕ್ಷ ರು. ಸಹಾಯ ಮಾಡುವುದಾಗಿ ಹೇಳಿ 25 ಸಾವಿರ ನೀಡಿ ಹೋದವರು. ಉಳಿದ ಹಣವನ್ನು ಕಳುಹಿಸಿಕೊಡುವುದಾಗಿ ಹೇಳಿ ಇದುವರೆಗೂ ನೀಡಿಲ್ಲ. ಹೀಗೆ ಸುಳ್ಳು ಹೇಳುವ ಸಂಸದರು ನಮಗೆ ಬೇಕಿಲ್ಲ. ಬಂಜಾರ ಸಮುದಾಯದ ಬಹುತೇಕರು ಕಾಂಗ್ರೆಸ್ ಜೊತೆ ಇದ್ದು, ಶ್ರೇಯಸ್ ಪಟೇಲ್ ಅವರಿಗೆ ಮತ ನೀಡಲಿದ್ದಾರೆ ಎಂದರು.ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಆರ್. ಸೋಮಶೇಖರ್, ದಕ್ಷಿಣಮೂರ್ತಿ ಇದ್ದರು.19ಕೆಕೆಡಿಯು1. ಕಡೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡ ಸತೀಶ್ ನಾಯ್ಕ ಸುದ್ದಿಗೋಷ್ಟಿ ನಡೆಸಿದರು.