ಸಾರಾಂಶ
1990ರಲ್ಲಿ ಗುಂಡೂರಾವ್ ಸರ್ಕಾರದ ಸಮಯದಲ್ಲಿ ಪ್ರೊ.ನಂಜುಂಡಸ್ವಾಮಿಯವರು ಹುಟ್ಟು ಹಾಕಿದ ಕರ್ನಾಟಕ ರಾಜ್ಯ ರೈತ ಸಂಘ ಇಂದಿಗೂ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಅಂತೋನಿಯರ್ ಕೋಯಿಲ್ ಗ್ರಾಮದಲ್ಲಿ ನೂತನ ಘಟಕ ಉದ್ಘಾಟಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಕರ್ನಾಟಕ ರಾಜ್ಯ ರೈತ ಸಂಘ ಅಂತೋನಿಯರ್ ಕೋವಿಲ್ ಗ್ರಾಮದಲ್ಲಿ ತನ್ನ ನೂತನ ಘಟಕವನ್ನು ಅಸ್ತಿತ್ವಕ್ಕೆ ತಂದಿದೆ. ಕೀರಪಾತಿ ಜಲಾಶಯವನ್ನು ನಿರ್ಮಿಸಿ ರೈತರ ಬೆಳೆಗೆ ನೀರು ಬಿಡದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರೈತರನ್ನು ವಂಚಿಸಿದ್ದಾರೆ ಎಂದು ತಿಳಿಸಿದರು.ರೈತರು, ಜಾನುವಾರುಗಳ ಸಮಸ್ಯೆಗಳನ್ನು ರೈತ ಸಂಘ ಅರಿತು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬಗೆಹರಿಸಿಕೊಳ್ಳಲು ಸಂಘಟನೆಯಿಂದ ಮಾತ್ರ ಸಾಧ್ಯ. 1990ರಲ್ಲಿ ಗುಂಡೂರಾವ್ ಸರ್ಕಾರದ ಸಮಯದಲ್ಲಿ ಪ್ರೊ.ನಂಜುಂಡಸ್ವಾಮಿಯವರು ಹುಟ್ಟು ಹಾಕಿದ ಕರ್ನಾಟಕ ರಾಜ್ಯ ರೈತ ಸಂಘ ಇಂದಿಗೂ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದೆ.
ಹನೂರು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಗ್ರಾಮದ ಜನರು ಹೊಸದಾಗಿ ಸ್ಥಾಪನೆಯಾದ ರೈತ ಸಂಘದ ಸದಸ್ಯತ್ವ ಪಡೆದು ಒಗ್ಗಟ್ಟಿನಿಂದ ಇರಬೇಕು. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲು ಸಂಘದ ಸರ್ವ ಸದಸ್ಯರು ನಿಷ್ಠೆ, ಒಮ್ಮತದಿಂದ ಹೋರಾಡುವ ಮೂಲಕ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ತಾಲೂಕು ಗೌರವ ಅಧ್ಯಕ್ಷ ರಾಜಣ್ಣ, ತಾಲೂಕು ಉಪಾಧ್ಯಕ್ಷ ಪರಣಿ ಸ್ವಾಮಿ, ಮಾರತಳ್ಳಿ ಘಟಕದ ಅಧ್ಯಕ್ಷ ಸೂಸೈ ಮಾಣಿಕ್ಯ ಅರ್ಪಿತರಾಜ್, ಅಂತೋನಿ ಸ್ವಾಮಿ, ವೆಟುಕಾಡು ಮಹಿಳಾ ಘಟಕದ ಅಧ್ಯಕ್ಷ ಸೂಸೈಯಮ್ಮ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.------