ಸಂಗೊಳ್ಳಿ ರಾಯಣ್ಣ ಆದರ್ಶ ಅಳವಡಿಸಿಕೊಳ್ಳಬೇಕು: ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ

| Published : Jan 17 2024, 01:48 AM IST

ಸಂಗೊಳ್ಳಿ ರಾಯಣ್ಣ ಆದರ್ಶ ಅಳವಡಿಸಿಕೊಳ್ಳಬೇಕು: ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂಗೊಳ್ಳಿ ರಾಯಣ್ಣ ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ನಾಯಕ ಗುಣವಿರುವ ವ್ಯಕ್ತಿಗೆ ಬೆಂಬಲ ನೀಡಬೇಕು. ಹಿಂದುಳಿದವರು ಒಗ್ಗಟಿಲ್ಲದೇ ಹರಿದು ಹಂಚಿ ಹೋದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು. ಹೊಳೆನರಸೀಪುರ ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ಅಣ್ಣೇಚಾಕನಹಳ್ಳೀಲಿ ಪ್ರತಿಮೆ ಅನಾವರಣ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಸಾವಿರಾರು ವರ್ಷಗಳಿಂದ ಹಿಂದುಳಿದು, ಶೋಷಣೆಗೆ ತುಳಿತಕ್ಕೆ ಒಳಗಾಗಿರುವ ಕಾರಣದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಮತ್ತು ಸಂಘಟಿತರಾಗಲು ಹಿಂದುಳಿದ ಜನಾಂಗದವರಿಗೆ ಈ ರೀತಿಯ ಕಾರ್ಯಕ್ರಮಗಳ ಅವಶ್ಯವಾಗಿದೆ. ಒಬ್ಬ ಮಹನೀಯ ವ್ಯಕ್ತಿಯನ್ನು ಸಮುದಾಯದ ಪ್ರತೀಕವನ್ನಾಗಿ ಮಾಡಿಕೊಂಡು, ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ನಾಯಕ ಗುಣವಿರುವ ವ್ಯಕ್ತಿಗೆ ಬೆಂಬಲ ನೀಡಬೇಕು. ಹಿಂದುಳಿದವರು ಒಗ್ಗಟಿಲ್ಲದೇ ಹರಿದು ಹಂಚಿ ಹೋದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

‘ನೀವು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ನೀಡಿದ ಬೆಂಬಲದಿಂದಾಗಿ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕನಕದಾಸರ ಜಯಂತಿ ಆಚರಣೆಗೆಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಿದರು. ಅದೇ ರೀತಿ ರಾಜ್ಯದಲ್ಲಿ ನೀವು ನೀಡಿದ ಬೆಂಬಲದಿಂದಾಗಿ ೨ ಸಲ ಮುಖ್ಯಮಂತ್ರಿಗಳಾಗಿ, ನೀಡಿದ ವಚನದಂತೆ ಪ್ರಣಾಳಿಕೆಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸಿದ್ಧರಾಮಯ್ಯನವರು ಷೋಷಿಸಿದ ೫ ಗ್ಯಾರಂಟಿಗಳನ್ನು ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದಲ್ಲೇ ಜಾರಿ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಂತೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡಿ, ಅವರಿಗೆ ಶಕ್ತಿ ನೀಡುವ ಜತೆಗೆ ಹಿಂದುಳಿದವರ ಏಳಿಗೆಗೆ ಅವರು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲು ಸಹಕಾರ ನೀಡಬೇಕು’ ಎಂದು ವಿನಂತಿಸಿದರು.

ಕೆ.ಆರ್.ನಗರ ಶಾಸಕ ರವಿಶಂಕರ್ ಮಾತನಾಡಿ, ಹಾಸನ ಹಾಗೂ ಮೈಸೂರು ಜಿಲ್ಲೆಯಲ್ಲಿ ಹಿಂದುಳಿದ ಜನಾಂಗದ ಹೋರಾಟದಲ್ಲಿ ಸೌಮ್ಯತೆಯಿದ್ದು, ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಗೂ ಡಾ. ಯತೀಂದ್ರ ಸಿದ್ಧರಾಮಯ್ಯ ಅವರು ಹೆಚ್ಚಿನ ಆಧ್ಯತೆ ನೀಡಿದ್ದಲ್ಲಿ ಸ್ಥಳೀಯವಾಗಿ ಹಿಂದುಳಿತ ಜನಾಂಗದವರ ಏಳಿಗೆಗೆ ಸಾಧ್ಯವಾಗಲಿದೆ. ಹಿಂದುಳಿದ ಜನಾಂಗದವರು ಮೊದಲಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ, ಮುನ್ನಡೆಯುವ ಚಾಕಚಕ್ಯತೆ ಬೆಳೆಸಿಕೊಂಡು, ಸಂಘಟಿತರಾಗಿ ಮುನ್ನಡೆಯಬೇಕು ಎಂದು ಕರೆಕೊಟ್ಟರು.

ಹಾಸನ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಟೇಲ್ ಶಿವರಾಂ, ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎ.ಡಿ.ಚಂದ್ರಶೇಖರ್ ಹಾಗೂ ಶ್ರೇಯಸ್‌ ಎಂ.ಪಟೇಲ್ ಮಾತನಾಡಿದರು.

ನಿವೃತ್ತ ಐಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎ.ಡಿ.ಚಂದ್ರಶೇಖರ್, ಸಮಾಜ ಸೇವಕ ಸಿ.ಡಿ.ದಿವಾಕರ್‌ಗೌಡರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಎ.ಸಿ. ದೊಡ್ಡೇಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೃಷ್ಣೇಗೌಡ ಸ್ವಾಗತಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಅವರು ಕ್ರಾಂತಿವೀರ ಸಂಗೋಳಿ ರಾಯಣ್ಣ ಪ್ರತಿಮೆಯ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಸಮಾಜ ಸೇವಕ ಸಿ.ಡಿ.ದಿವಾಕರ್, ಜಯದೇವ ಆಸ್ಪತ್ರೆಯ ವ್ಯದ್ಯ ಡಾ. ಬೀರೇಶ್, ಮುಖಂಡರಾದ ಲಕ್ಷ್ಮಣ, ಎ.ಡಿ.ಶಾಂತರಾಜು, ಶರತ್, ಕಿರಣ್, ಮಹದೇವು, ಲಕ್ಕಣ್ಣ ಇದ್ದರು.ಹೊಳೆನರಸೀಪುರ ತಾಲೂಕು ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಸಾರ್ವಜನಿಕ ಸಮಾರಂಭ ಉದ್ಘಾಟಿಸಿದರು.