ಸಂಜೀವಿನಿ ಉತ್ಪನ್ನ ಪ್ರತಿಯೊಬ್ಬರು ಉಪಯೋಗಿಸಿ: ಹಾದಿಮನಿ

| Published : Oct 27 2024, 02:17 AM IST

ಸಂಜೀವಿನಿ ಉತ್ಪನ್ನ ಪ್ರತಿಯೊಬ್ಬರು ಉಪಯೋಗಿಸಿ: ಹಾದಿಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಆದಾಯ ಗಳಿಸಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದೆ ಬರಬೇಕು

ನರಗುಂದ: ಗ್ರಾಮೀಣ ಪ್ರದೇಶಗಳ ಸಂಜೀವಿನಿ ಮಹಿಳಾ ಗುಂಪಿನ ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತೇಜನ ಕಲ್ಪಿಸುವ ಉದ್ದೇಶದಿಂದ ನರಗುಂದದ ಪತಂಜಲಿ ಸ್ಟೋರ್ ನಲ್ಲಿ ಅವಕಾಶ ಕಲ್ಪಿಸಿರುವುದು ಮಹಿಳಾ ಸ್ವಸಹಾಯ ಸಂಘದವರಿಗೆ ಅನುಕೂಲವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ ಹೇಳಿದರು.

ಅವರು ಪಟ್ಟಣದ ಪತಂಜಲಿ ಸ್ಟೋರ್ ನಲ್ಲಿ ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ಮತ್ತು ಪತಂಜಲಿ ಸ್ಟೋರ್ ಸಹಯೋಗದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ತಯಾರಿಸಿರುವ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಹಾಗೂ ಗ್ರಾಹಕರಿಗೆ ಉತ್ಪನ್ನ ಪರಿಚಯಿಸುವದರೊಂದಿಗೆ ಆದಾಯ ಗಳಿಸಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದೆ ಬರಬೇಕು ಎಂದರು.

ವ್ಯವಸ್ಥಾಪಕ ಮೋಹನ ಕೃಷ್ಣ ಮಾತನಾಡಿ, ಮಹಿಳಾ ಗುಂಪುಗಳು ತಯಾರಿಸಿದ ಉತ್ಪನ್ನ ಮಾರಾಟ ಮಾಡಲು ಪತಂಜಲಿ ಸ್ಟೋರ್ ಮಾಲೀಕರು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಮಹಿಳಾ ಸಂಘದವರು ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ ಎಂದರು.

ಮೋಹನ್ ಉಪಾಸಿ, ಪ್ರದೀಪ್ ಕದಮ, ಪತಂಜಲಿ ಸ್ಟೋರ್ ನ ಮಾಲೀಕ ಪ್ರಶಾಂತ, ಸಂಜೀವಿನಿ ಯೋಜನೆಯ ಮೇಲ್ವಿಚಾರಕ ಲಕ್ಷ್ಮಣ್ ಪೂಜಾರ, ತಾಲೂಕು ಹಾಗೂ ಗ್ರಾಪಂ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.