ಸಾರಾಂಶ
ಗುರುಮಠಕಲ್ ಸಮೀಪದ ಯಾನಗುಂದಿಯ ಮಾತಾ ಮಾಣಿಕೇಶ್ವರಿ ಬೆಟ್ಟದಲ್ಲಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಸುಕ್ಷೇತ್ರ ಯಾನಾಗುಂದಿ ಗ್ರಾಮದ ಸೂರ್ಯನಂದಿ ಬೆಟ್ಟದಲ್ಲಿ ಸದ್ಗುರು ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಅದ್ಧೂರಿಯಾಗಿ ಕುಂಭಪೂಜೆ ಸಲ್ಲಿಸುವುದರ ಮೂಲಕ ಸಂಕ್ರಾಂತಿ ಹಬ್ಬವನ್ನು ಭಕ್ತರು ಸಂಭ್ರಮದಿಂದ ಆಚರಿಸಿದರು.ಮಾತಾಜಿ ಪಾದಪೂಜೆ, ಅಭಿಷೇಕ ಹಾಗೂ ಮಂಗಳಾರತಿ ಮಾಡಿದ ನಂತರ ಮಾತಾ ಮಾಣಿಕೇಶ್ವರಿ ದರ್ಶನ ಪ್ರಸಾದವನ್ನು ಭಕ್ತರಿಗೆ ಹಂಚಿದರು. ಕುಂಭ ಪೂಜೆಕ್ಕಿಂತ ಮುಂಚೆ, ಶಿವಾಲಯ ಮತ್ತು ವೆಂಕಟರಾಮಣ ಹಾಗೂ ಅಂಬಾಭವಾನಿ ಮಂದಿರದಲ್ಲಿ ಪೂಜೆ ನೇರವೇರಿಸಲಾಯಿತು. ಕಳೆದ ಮೂರು ದಿನಗಳಿಂದ ನಿರಂತರ ಭಜನೆ ಕಾರ್ಯಕ್ರಮಗಳು ಜರುಗಿದವು.
ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮಾತನಾಡಿ, ಮಾತಾ ಮಾಣಿಕೇಶ್ವರಿ ಅಮ್ಮನವರು ಅಹಿಂಸಾ ತತ್ವಗಳನ್ನು ಬೋಧಿಸುತ್ತಿದ್ದರು. ನಾವೆಲ್ಲರೂ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಮಾತಾಜಿ ಅವರ ಮಾರ್ಗದರ್ಶನದಂತೆ ಸಕಲ ಜೀವಿಗಳು ಶಾಂತಿ, ಸುಖ, ಸಹಬಾಳ್ವೆ ಮತ್ತು ಆರೋಗ್ಯ, ಸಂಪತ್ತುಗಳಿಂದ ಕೂಡಿರಬೇಕು ಎಂದರು.ಎಲ್ಲರೂ ಉತ್ತಮ ನಡವಳಿಕೆಯಿಂದ ಸನ್ಮಾರ್ಗದ ಕಡೆ ಮತ್ತು ಧರ್ಮದ ಕಡೆ ನಡೆಯಲು ಪೂಜೆ ಹಮ್ಮಿಕೊಳ್ಳಲಾಗಿದೆ. ಸಂಕ್ರಮಣದಿಂದ ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಿದ್ದು ಎಲ್ಲರ ಬಾಳು ಬಂಗಾರವಾಗಲಿ ಎಂಬುದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದರು.
ಟ್ರಸ್ಟ್ ಸದಸ್ಯರಾದ ಜಿ. ಜ್ಞಾನೇಶ್ವರ, ಮಂದರಯ್ಯ, ಶಿವರಾಮರೆಡ್ಡಿ, ಜಗಜೀವನರೆಡ್ಡಿ, ಪಾರ್ವತರೆಡ್ಡಿ ಕೊಡ್ಲಾ, ಅನಪೂರ ಮೌಲಾಲಿ, ಸಿದ್ರಾಮಪ್ಪ ಸಣ್ಣೂರ, ಗೋಪಾಲ ಚಂಡರಕಿ, ಕಿಷ್ಟಪ್ಪ ಪುರುಷೋತ್ತಮ, ಕಿಷ್ಟರೆಡ್ಡಿ ಚಂಡರಕಿ, ಅಮೀನಾಬೇಗಂ, ಸೂರ್ಯ ನಾರಾಯಣ ಸೇರಿದಂತೆ ಇತರರಿದ್ದರು.ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಕುಂಭ ಪೂಜೆ ನೋಡಲು ಬಂದಿದ್ದು, ಸಂತೋಷವಾಗಿದೆ. ಜನರಲ್ಲಿ ಹೊಸ ಆಶಾಕಿರಣ ಮೂಡುತ್ತದೆ ಎಂಬ ನಂಬಿಕೆ ಇದೆ.
ಲಲಿತಾ ಅನಪೂರ, ಬಿಜೆಪಿ ರಾಜ್ಯ ಕಾರ್ಯದರ್ಶಿಎಲ್ಲರೂ ಮಾತಾಜಿ ಬೋಧನೆಗಳನ್ನು ಪಾಲಿಸಿ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಮುಂದಿನ ಕಠಿಣ ದಿನಗಳು ಪಾರಾಗಲು ಆಧ್ಯಾತ್ಮಿಕ ಮಾರ್ಗ ಒಂದೇ ಇದೆ
ಶಿವಯ್ಯ ಸ್ವಾಮಿ, ಟ್ರಸ್ಟ್ ಕಾರ್ಯದರ್ಶಿ, ಸೂರ್ಯನಂದಿ ಕ್ಷೇತ್ರ.