ನಮ್ಮ ಸಂಸ್ಕೃತಿ, ವಿಚಾರಗಳು ಮರೆಯಾಗುತ್ತಿವೆ

| Published : Jan 15 2024, 01:46 AM IST

ಸಾರಾಂಶ

ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ನಮ್ಮ ದೇಶದ ಸಂಸ್ಕೃತಿ ಮರೆಯಾಗುತ್ತಿದೆ. ಇದಕ್ಕೆ ಕಾರಣರಾದ ನಾವು ಬದಲಾಗಬೇಕು. ನಮ್ಮ ಪರಂಪರೆ ಉಳಿಸುವ ಉದ್ದೇಶದಿಂದ ಸಿಂದಗಿಯ ಅವ್ವಾ ಫೌಂಡೇಶನ್ ಮತ್ತು ಮಂದಾರ ಪ್ರತಿಷ್ಠಾನ ಹಮ್ಮಿಕೊಂಡಿರುವ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಜಾನಪದದ ಸಿರಿಯನ್ನು ಇಮ್ಮಡಿಗೊಳಿಸುತ್ತಿದ್ದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಭಾರತ ಭವ್ಯ ಪರಂಪರೆ ಹೊಂದಿದ ದೇಶ. ಆದರೆ, ಇಂದು ನಮ್ಮ ಸಂಸ್ಕೃತಿ - ವಿಚಾರಗಳು ಮರೆಯಾಗುತ್ತಿವೆ. ಹಬ್ಬ-ಹರಿದಿನಗಳು ಸಂಸ್ಕೃತಿಯ ಪ್ರತೀಕ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.

ಅವರು ಪಟ್ಟಣದ ಬಸವ ಮಂಟಪದಲ್ಲಿ ಅವ್ವಾ ಫೌಂಡೇಶನ್ ಮತ್ತು ಮಂದಾರ ಪ್ರತಿಷ್ಠಾನಗಳು ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದ ನಮ್ಮ ದೇಶದ ಸಂಸ್ಕೃತಿ ಮರೆಯಾಗುತ್ತಿದೆ. ಇದಕ್ಕೆ ಕಾರಣರಾದ ನಾವು ಬದಲಾಗಬೇಕು. ನಮ್ಮ ಪರಂಪರೆ ಉಳಿಸುವ ಉದ್ದೇಶದಿಂದ ಸಿಂದಗಿಯ ಅವ್ವಾ ಫೌಂಡೇಶನ್ ಮತ್ತು ಮಂದಾರ ಪ್ರತಿಷ್ಠಾನ ಹಮ್ಮಿಕೊಂಡಿರುವ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಜಾನಪದದ ಸಿರಿಯನ್ನು ಇಮ್ಮಡಿಗೊಳಿಸುತ್ತಿದ್ದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಗ್ರಾಮೀಣ ಮೂಲ ಸಂಸ್ಕೃತಿ ಬಿಂಬಿಸುವ ಜಾನಪದದಲ್ಲಿ ಬದುಕಿನ ನಿಜವಾದ ಮೌಲ್ಯಗಳು ಅಡಕವಾಗಿವೆ. ಜನಪದರು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಅನುಭವಿಸಿದ ನೋವು - ನಲಿವು, ದುಃಖ ದುಮ್ಮಾನಗಳನ್ನು ಹೃದಯದಿಂದ ಹಾಡಿದ್ದಾರೆ. ಆದರೆ, ಇಂದು ವ್ಯಾಪಕವಾದ ವೈಜ್ಞಾನಿಕತೆ ಮೂಡಿದ ಮೇಲೆ ಜಾನಪದದ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.ಅಧ್ಯಕ್ಷತೆ ವಹಿಸಿದ ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಮಾತನಾಡಿ, ಇಂದು ನಿರಂತರವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಜಾನಪದ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮೂಡಿ ಬರುವುದು ಅನಿವಾರ್ಯವಾಗಿದೆ. ಇವುಗಳು ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುತ್ತವೆ ಎಂದರು.

ಸಿಂದಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಯದ ಸಂಚಾಲಕಿ ರಾಜಯೋಗಿನಿ ಪವಿತ್ರಾ ಅಕ್ಕನವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ದಂತ ವೈದ್ಯ ಸಿದ್ದರಾಮ ಚಿಂಚೋಳ್ಳಿ, ಚಂದ್ರಶೇಖರ ನಾಗರಬೆಟ್ಟ, ಮುತ್ತು ಪಟ್ಟಣಶೆಟ್ಟಿ, ಮಹಿಬೂಬ ಅಸಂತಾಪೂರ, ಸಬೀಯಾಬೇಗಂ ಮರ್ತೂರು, ಅವ್ವಾ ಫೌಂಡೇಶನ್ ಸಂಚಾಲಕ ಸಿದ್ದಲಿಂಗ ಕಿಣಗಿ, ಮಂದಾರ ಪ್ರತಿಷ್ಠಾನದ ಸಂಚಾಲಕ ಸಿದ್ದಲಿಂಗ ಚೌಧರಿ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಎಂ.ಬಿ.ಅಲ್ದಿ, ಮೀನಾಕ್ಷಿ ವಾಗ್ಮೋರೆ ಹಾಗೂ ಪ್ರಕಾಶ ಹೊಳಿನ ಅವರು ಜಾನಪದ ಗೀತೆಗಳಿಗೆ ಚಿತ್ರ ಬಿಡಿಸಿದ್ದು ಹಾಗೂ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿ ಧನುಷ ಶಾಂತಪ್ಪ ಗೋಣಿ ಪ್ರದರ್ಶಿಸಿದ ಕಾಂತಾರಾ ಚಿತ್ರದ ಸನ್ನಿವೇಶ ಪ್ರೇಕ್ಷಕರ ಗಮನ ಸೆಳೆಯಿತು.

ಈ ವೇಳೆ ಡಾ.ಪ್ರಕಾಶ ರಾಗರಂಜಿನಿ, ಮಾಳು ಹೊಸೂರ, ನವೀನ ಶೆಳ್ಳಗಿ, ಸುರೇಶ ಭಜಂತ್ರಿ, ಎಂ.ಎಸ್.ರೂಗಿ, ರಶ್ಮೀ ನಾಯಕ, ಜಗದೀಶ ಪಾಟೀಲ, ಮುತ್ತು ಬ್ಯಾಕೋಡ, ಖಾದರ ನಾಟಿಕಾರ, ಶೈನಾಬಿ ಮಸಳಿ, ಜ್ಞಾನೇಶ ಗೂರವ, ಮಹಾನಂದ ಬಮ್ಮಣ್ಣಿ, ಸುನಂದಾ ಯಂಪೂರೆ, ಆರ್‌.ಎಂ.ನದಾಪ, ಪ್ರಲ್ಲಾದ ಜಿ.ಕೆ.ಭಾರತಿ ಅಗಸಬಾಳ, ಪ್ರಕಾಶ ಸಿಂಗೆ ಸೇರಿದಂತೆ ಇತರರು ಇದ್ದರು.