ತಾಲೂಕಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ

| Published : Jan 15 2024, 01:48 AM IST

ಸಾರಾಂಶ

ಗ್ರಾಮೀಣ ಭಾಗದ ರೈತರು ಸಂಕ್ರಾಂತಿ ಹಬ್ಬವನ್ನು ಬರಮಾಡಿಕೊಳ್ಳಲು ವಿಶೇಷ ರೀತಿಯ ಸಿದ್ಧತೆ ನಡೆಸಿದ್ದು. ಕಷ್ಟಪಟ್ಟು ಬೆಳೆದ ಬೆಳೆಯನ್ನು ಒಂದೆಡೆ ರಾಶಿಹಾಕಿ ಪೂಜಿಸುವುದು ಹಬ್ಬದ ವಿಶೇಷ.

ಕನ್ನಡ ಪ್ರಭ ವಾರ್ತೆ ಗುಬ್ಬಿ

ಸಂಕ್ರಾಂತಿ ಹಬ್ಬದ ಹಿನ್ನೆಲೆ ಎಳ್ಳು, ಬೆಲ್ಲ, ಸಕ್ಕರೆ, ಕಡಲೆ ಕಾಯಿ, ಗೆಣಸು ಹಾಗೂ ಕಬ್ಬಿನ ಜಲ್ಲೆ ಭಾನುವಾರ ಭರ್ಜರಿ ಮಾರಾಟವಾಗಿದ್ದು, ತಾಲೂಕಿನ ಹಾಗೂ ಪಟ್ಟಣದ ಗ್ರಾಹಕರು ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂದಿತ್ತು.

ಗ್ರಾಮೀಣ ಭಾಗದ ರೈತರು ಸಂಕ್ರಾಂತಿ ಹಬ್ಬವನ್ನು ಬರಮಾಡಿಕೊಳ್ಳಲು ವಿಶೇಷ ರೀತಿಯ ಸಿದ್ಧತೆ ನಡೆಸಿದ್ದು. ಕಷ್ಟಪಟ್ಟು ಬೆಳೆದ ಬೆಳೆಯನ್ನು ಒಂದೆಡೆ ರಾಶಿಹಾಕಿ ಪೂಜಿಸುವುದು ಹಬ್ಬದ ವಿಶೇಷ.

ವರ್ಷವಿಡೀ ರೈತರ ಬೆನ್ನೆಲುಬಾಗಿ ದುಡಿದ ಎತ್ತುಗಳನ್ನು ಸಿಂಗರಿಸಿ ದೇವಾಲಯಗಳಿಗೆ ಕರೆದೊಯ್ದು ಪೂಜಿಸಲಾಗುತ್ತದೆ. ರೈತನು ಉತ್ತಮವಾದ ಮಳೆ,ಬೆಳೆಗೆ, ರಾಸುಗಳ ಉತ್ತಮ ಆರೋಗ್ಯಕ್ಕಾಗಿ ದೇವರನ್ನು ಕೋರುತ್ತಾನೆ.

ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಎಳ್ಳು, ಬೆಲ್ಲ, ವಿವಿಧ ಬಣ್ಣಗಳ ಸಕ್ಕರೆ ಅಚ್ಚುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಕಬ್ಬು, ಗೆಣಸು, ಎಳ್ಳು- ಬೆಲ್ಲಗಳಿಗೆ ಹೆಚ್ಚಿನ

ಬೇಡಿಕೆಯಿರುವುದರಿಂದ ದರದಲ್ಲೂ ಏರಿಕೆಯಾಗಿದೆ. ಜೋಡಿ ಕಬ್ಬು 80 ರಿಂದ 100 ರು., ಗೆಣಸು ಕೆಜಿಗೆ 40 ರಿಂದ 50 ರು., ಅವರೆಕಾಯಿ 80 ರಿಂದ 100 ರು., ಬಾಳೆಹಣ್ಣು ಡಜನ್ ಗೆ 60 ರಿಂದ 80 ರು.,ಎಳ್ಳುಬೆಲ್ಲ ಮಿಶ್ರಣದ ಒಂದು ಕೆಜಿ ಪಟ್ಟಣಕ್ಕೆ 120 ರಿಂದ 150 ರು., ಸಕ್ಕರೆ ಅಚ್ಚುಗಳು ಕೆಜಿಗೆ 200 ರಿಂದ 230 ರು.ಗಳಿಗೆ ಮಾರಾಟವಾಗಿವೆ. ಹಬ್ಬದ ಸಂಭ್ರಮಕ್ಕೆ ತರಕಾರಿ ಬೆಲೆ ಅಷ್ಟಾಗಿ ದುಬಾರಿಯಾಗಿ ಪರಿಣಮಿಸಿಲ್ಲ. ಹಣ್ಣಿನ ಬೆಲೆಗಳೂ ಏರಿಕೆಯಾಗಿಲ್ಲ.

----

14 ಜಿ ಯು ಬಿ 1

ಸಂಕ್ರಾಂತಿ ಹಬ್ಬದ ಹಿನ್ನೆಲೆ ಜನರು ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಮುಗಿಬಿದ್ದಿರುವುದು ಕಂಡುಬಂದಿತ್ತು.

----