ಹಬ್ಬ-ಹರಿದಿನಗಳ ಆಚರಣೆಯಿಂದ ಮಕ್ಕಳಿಗೆ ದೇಶದ ಸಂಸ್ಕೃತಿಯ ಪರಿಚಯವಾಗುತ್ತದೆ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳನ್ನು ಯಾವ ರೀತಿ ಆಯೋಜಿಸಲಾಗುತ್ತದೆ ಮತ್ತು ಅದರ ಮಹತ್ವ ಅವರಿಗೆ ತಿಳಿಯುತ್ತದೆ.

ಧಾರವಾಡ:

ಇಲ್ಲಿಯ ವಿದ್ಯಾಗಿರಿಯ ಜೆಎಸ್‌ಎಸ್‌ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಮಂಗಳವಾರ ಸಂಕ್ರಾಂತಿ ಸಂಭ್ರಮ ಹಾಗೂ ಸಂತೆ ಮನಸೂರೆಗೊಂಡಿತು.

ವಿವಿಧ ರಾಜ್ಯದಲ್ಲಿ ಹೇಗೆ ಸಂಕ್ರಾಂತಿ ಆಚರಿಸುತ್ತಾರೆ ಎಂದು ಉಡುಗೆ-ತೊಡುಗೆ ತೊಟ್ಟು ಮಕ್ಕಳು ಹಬ್ಬದ ಆಚರಣೆಗಳನ್ನು ಪ್ರದರ್ಶಿಸಿದರು. ಹಬ್ಬಕ್ಕೆ ತಯಾರಿಸುವ ವಿವಿಧ ಭಕ್ಷ-ಭೋಜನ ತಯಾರಿಸಿ ತಂದಿದ್ದು ವಿಶೇಷ. ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹಬ್ಬದ ಊಟ ಸವಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಬ್ಬ-ಹರಿದಿನಗಳ ಆಚರಣೆಯಿಂದ ಮಕ್ಕಳಿಗೆ ದೇಶದ ಸಂಸ್ಕೃತಿಯ ಪರಿಚಯವಾಗುತ್ತದೆ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳನ್ನು ಯಾವ ರೀತಿ ಆಯೋಜಿಸಲಾಗುತ್ತದೆ ಮತ್ತು ಅದರ ಮಹತ್ವ ಅವರಿಗೆ ತಿಳಿಯುತ್ತದೆ. ಅಲ್ಲದೇ ಮಕ್ಕಳಲ್ಲಿ ಇದು ಸೌಹಾರ್ದಯುತ ಭಾವನೆ ಬೆಳೆಯಲು ಸಹಕಾರಿ ಎಂದರು.

ಈ ಹಬ್ಬವು ಪುಣ್ಯಸ್ಥಾನ, ಎಳ್ಳು-ಬೆಲ್ಲ ಹಂಚುವ ಮೂಲಕ ದ್ವೇಷ ಮರೆತು ಎಲ್ಲರು ಒಂದಾಗಿ ಆಚರಿಸುವುದನ್ನು ಕಲಿಸುತ್ತದೆ. ಗಾಳಿಪಟ ಹಾರಿಸುವುದು, ವಿವಿಧ ತರಹದ ಸಿಹಿ ತಿನಿಸು ಕಟ್ಟಿಕೊಂಡು ಒಟ್ಟಾಗಿ ಊಟ ಮಾಡುವುದು ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣ ಮಾಡುತ್ತದೆ ಎಂದರು.

ಇದೇ ವೇಳೆ ಮಕ್ಕಳಿಂದ ಸಂಕ್ರಾಂತಿ ನೃತ್ಯ, ರ‍್ಯಾಪಿಡ್ ಎನ್‌ಜಿಒ, ವೇದಾ ಎನ್‌ಜಿಒ ಸಿಬ್ಬಂದಿಗಳಿಂದ ಶಾಲಾ ಮಕ್ಕಳು ಮತ್ತು ಸಿಬ್ಬಂದಿಗಳಿಂದ ಕುಸರೆಳ್ಳು, ಕಡಲೇಕಾಯಿ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಕಬ್ಬು, ಚಟ್ನಿಪುಡಿ, ತರಕಾರಿ, ಚಿಗಳಿ, ಉಪ್ಪಿಕಾಯಿ, ಹೊಸ ಬಟ್ಟೆ ಒಳಗೊಂಡಂತೆ 60 ಮಾರಾಟ ಮಳಿಗೆ ತರೆಯಲಾಗಿತ್ತು. ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯರಾದ ಸಾಧನಾ ಎಸ್. ಮಹಾವೀರ ಉಪಾದ್ಯೆ, ಮಾಲವಿಕಾ ಕಡಕೋಳ ಇದ್ದರು.