ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಾಸುಗಳಿಗೆ ಅಲಂಕಾರ,ಮೆರವಣಿಗೆ ನಡೆಸಿದ್ದರೆ ನಗರದಲ್ಲಿ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ಗೋಪಾಲಕರ ತವರಾದ ಕಿಲಾರಿಪೇಟೆಯಲ್ಲಿ ಗೋಪೂಜೆ, ರಾಸುಗಳಿಗೆ ಮೇವು ವಿತರಣೆಗೆ ಒತ್ತು ನೀಡಲಾಗಿತ್ತು.ಸಂಕ್ರಾಂತಿ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ರಾಸುಗಳನ್ನು ತೊಳೆದು ಸಿಂಗರಿಸಿ ಮೆರವಣಿಗೆ ಮಾಡುವ ಸಂಪ್ರದಾಯ ಈ ಬಾರಿಯೂ ಮುಂದುವರೆದಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆಯೂ ನಡೆಯಿತು.ಗೋವುಗಳ ಮೆರವಣಿಗೆ
ರೈತರು ತಮ್ಮ ಗೋವುಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಿ ವರ್ಣರಂಜಿತ ದಿರಿಸು ತೊಡೆಸಿ ಮೆರವಣಿಗೆಯಲ್ಲಿ ಸಾಗಿ ಗ್ರಾಮದ ಊರು ಬಾಗಿಲಿನಲ್ಲಿ ಕಿಚ್ಚು ಹಾಯಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ. ಗೋವುಗಳಿಗೆ ರೋಗರುಜಿನಗಳು ಬಾರದಿರಲಿ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅನ್ನ,ಮೊಸರು ಹಾಕಿದ ಅಮದು ಇಡುವ ಮೂಲಕ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.ಕಿಲಾರಿಪೇಟೆಯ ರುಕ್ಮಿಣಿ, ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರತಿ ವರ್ಷದಂತೆ ಈ ವರ್ಷವೂ ಗೋವುಗಳನ್ನು ಅಲಂಕರಿಸಿ ಮೆರವಣಿಗೆ ನಡೆಸುತ್ತಿದ್ದ ಕಿಲಾರಿಪೇಟೆಯ ಗೋಪಾಲಕರು ಈ ಬಾರಿಯೂ ಗೋವುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ದೇವಾಲಯಕ್ಕೆ ಅಲಂಕಾರಸಂಕ್ರಾಂತಿ ಅಂಗವಾಗಿ ವೇಣುಗೋಪಾಲಸ್ವಾಮಿಯ ಇಡೀ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದು, ತಮ್ಮ ಗೋವುಗಳಿಗೆ ಉತ್ತಮ ಆರೋಗ್ಯ ಸಿಗಲಿ ಎಂದು ಗೋಪಾಲಕರು ಪ್ರಾರ್ಥಿಸಿದರು.
ಪೂಜಾ ಕಾರ್ಯದಲ್ಲಿ ಮೇಸ್ತ್ರಿ ನಾರಾಯಣಸ್ವಾಮಿ, ಕೆ.ವಿ.ಚೌಡಪ್ಪ, ಮುನಿಸ್ವಾಮಪ್ಪ, ಮುನಿವೆಂಕಟಯಾದವ್, ಕೆ.ಎನ್.ವೆಂಕಟೇಶ್, ಕೆ.ಎನ್.ಮುನಿಕೃಷ್ಣ, ಎಂ.ಮಣಿ, ಶಬರೀಷ್ ಯಾದವ್, ಪ್ರಭಾಕರ್, ವಿಶ್ವನಾಥ್, ಕೆ.ವಿ.ರಮೇಶ್, ಒಳ್ಳೆಪ್ಪ, ಮುನಿರಾಮಪ್ಪ, ಮುನಿರಾಜಪ್ಪ, ಮೇಸ್ತ್ರಿ ಚೌಡಪ್ಪ, ರಮೇಶ್‌ಯಾದವ್, ಚಿನ್ನಪ್ಪಿ, ಶಬರಿ, ಜಿ.ಕೃಷ್ಣಮೂರ್ತಿ, ಕೆ.ಜೆ.ಬಾಬು, ಪುರುಷೋತ್ತಮ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಕೆ.ಎಸ್.ಗಣೇಶ್, ರಾಮಕೃಷ್ಣ, ಚಲಪತಿ, ವೆಂಕಟರಾಮ್,ಪದ್ಮನಾಭ್, ಪ್ರಭಾಕರ್ ಇದ್ದರು.