ಸಂಕ್ರಾಂತಿ ಹಬ್ಬವನ್ನು ರೈತರು ತಾವು ವರ್ಷ ಪೂರ್ತಿ ವ್ಯವಸಾಯ ಮಾಡಿ ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅವುಗಳಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬವಾಗಿ ಆಚರಿಸುವುದು, ರೈತರಿಗೆ ವ್ಯವಸಾಯದಲ್ಲಿ ಪೂರಕವಾಗಿ ಸಹಕಾರ ನೀಡಿದ ವ್ಯವಸಾಯ ಸಲಕರಣೆಗಳು, ಹಸು, ಕರು, ದನಗಳನ್ನು ಪೂಜಿಸುವುದು.
ಹಲಗೂರು:
ಸಮೀಪದ ವಳಗೆರೆದೊಡ್ಡಿ ಗ್ರಾಮದ ಶ್ರೀಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಶಾಲಾ ಆವರಣದಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ನಡೆಯಿತು.ಕನ್ನಡ ಶಿಕ್ಷಕ ಶಿವ ಬೀರಯ್ಯ ಮಾತನಾಡಿ, ಸಂಕ್ರಾಂತಿ ಹಬ್ಬವನ್ನು ರೈತರು ತಾವು ವರ್ಷ ಪೂರ್ತಿ ವ್ಯವಸಾಯ ಮಾಡಿ ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅವುಗಳಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬವಾಗಿ ಆಚರಿಸುವುದು, ರೈತರಿಗೆ ವ್ಯವಸಾಯದಲ್ಲಿ ಪೂರಕವಾಗಿ ಸಹಕಾರ ನೀಡಿದ ವ್ಯವಸಾಯ ಸಲಕರಣೆಗಳು, ಹಸು, ಕರು, ದನಗಳನ್ನು ಪೂಜಿಸುವುದು. ಅಲ್ಲದೇ, ಹಸು ದನ ಕರುಗಳನ್ನು ಕಿಚ್ಚಾಯಿಸುವುದು ವಾಡಿಕೆ. ಇದರ ಜೊತೆಗೆ ಎಳ್ಳು ಬೆಲ್ಲ ಹಂಚಿ ಒಳ್ಳೆಯ ಮಾತನಾಡಿ ಎಂದು ಹಾರೈಸುವುದು ಸಂಪ್ರದಾಯ ಎಂದು ಮಕ್ಕಳಿಗೆ ತಿಳಿಸಿ ಹೇಳಿದರು.
ಮಕ್ಕಳು ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟ ಒಬ್ಬರಿಗೊಬ್ಬರು ಶುಭಾಶಯಗಳು ಕೋರುತ್ತಾ ಸಂತೋಷ ಪಟ್ಟರು. ಶಾಲೆ ಸಂಸ್ಥಾಪಕ ಎಚ್.ವಿ. ಅಶ್ವಿನ್ ಕುಮಾರ್, ಅಕ್ಷತಾ ಅಶ್ವಿನ್ ಕುಮಾರ್, ಮೇಲ್ವಿಚಾರಕಿ ಹೆಚ್ ಶ್ವೇತಕುಮಾರಿ ಸೇರಿದಂತೆ ಶಿಕ್ಷಕ ವೃಂದ ಇದ್ದರು.22 ಸೆಕೆಂಡ್ ಸೆಂಚುರಿ ಶಾಲೆ: ಸಂಕ್ರಾಂತಿ ಸಂಭ್ರಮ
ಮಂಡ್ಯ: ನಗರದ 22ಸೆಕೆಂಡ್ ಸೆಂಚುರಿ ಪಬ್ಲಿಕ್ ಶಾಲೆ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಧಾನ್ಯ ರಾಶಿಗಳಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪೂಜೆ ಮಾಡುವ ಮೂಲಕ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿದರು.ನಂತರ ಶಾಲೆ ಮುಖ್ಯ ಶಿಕ್ಷಕಿ ಸೌಮ್ಯ ಮಾಲಾ ಮಾತನಾಡಿ, ಸಂಕ್ರಾಂತಿ ಹಬ್ಬ ಆಚರಣೆ ಮೂಲಕ ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ತಿಳಿಸಿ ಕೊಡುವ ಕೆಲಸ ಮಾಡಿದ್ದೇವೆ. ವಿಶೇಷವಾಗಿ ರಾಶಿ ಪೂಜೆ ಸಿಹಿ ಕಬ್ಬು ಅವರೇ ಕಾಯಿ ಗೆಣಸು ಸೇರಿದಂತೆ ವಿವಿಧ ಬಗೆಯ ಧಾನ್ಯಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದೇವೆ ಎಂದರು.
ಶಾಲೆ ಆವರಣದಲ್ಲಿ ರಂಗುರಂಗಿನ ರಂಗೋಲಿ ಬಿಡಿಸಿ ಸಂಭ್ರಮಿಸಿದರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಎಳ್ಳು ಬೆಲ್ಲ ನೀಡುವ ಮೂಲಕ ಆಚರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶೃತಿ, ಪೂರ್ಣಿಮಾ, ಮಹಾಲಕ್ಷ್ಮಿ, ಶ್ವೇತಾ, ಸುಮ ಭಾಗವಹಿಸಿದ್ದರು.