ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಅವಶ್ಯಕ

| Published : Oct 25 2024, 12:57 AM IST

ಸಾರಾಂಶ

ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿ ಜ್ಞಾನಾರ್ಜನೆಗೆ ತಮ್ಮ ಸಮಯ ಮೀಸಲಿಡಬೇಕೆ ವಿನಹ ಮೊಬೈಲ್‌ ದಾಸರಾಗಬಾರದು

ಗದಗ: ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಅವಶ್ಯಕ, ಇದರಿಂದ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯ ಎಂದು ಗದುಗಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಪ್ಪ ಕುರಿ ಹೇಳಿದರು.

ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ, ಬಿಕಾಂ ಹಾಗೂ ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದಿಶೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ ಇದರಿಂದ ಸಾಮಾಜಿಕ ಮೌಲ್ಯಗಳು, ಸಾಮಾಜಿಕ ಸಂಬಂಧ, ಶೈಕ್ಷಣಿಕ ಗುಣಮಟ್ಟ ಹಾಗೂ ಸಮಾಜದಲ್ಲಿರುವ ವ್ಯಕ್ತಿಗಳ ಮನಸ್ಥಿತಿ ಕುಗ್ಗುತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿ ಜ್ಞಾನಾರ್ಜನೆಗೆ ತಮ್ಮ ಸಮಯ ಮೀಸಲಿಡಬೇಕೆ ವಿನಹ ಮೊಬೈಲ್‌ ದಾಸರಾಗಬಾರದು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಸುಧಾ ಕೌಜಗೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಹಾಗೂ ಶಿಸ್ತು ಪಾಲನೆಗಳಿದ್ದರೆ ಭವಿಷ್ಯವನ್ನು ಸುವರ್ಣಾಕ್ಷರದಲ್ಲಿ ಬರೆಯಬಹುದು ಎಂದು ಹೇಳಿದರು.

ಡಾ. ಎಲ್.ಸಿ. ಮುಳಗುಂದ, ಡಾ. ಅಪ್ಪಣ್ಣ ಹಂಜೆ, ಡಾ.ಜಿತೇಂದ್ರ ಜಹಗೀರದಾರ, ಡಾ. ಬಸವರಾಜ ಅಂಬಿಗೇರ, ರಮೇಶ ಹುಲಕುಂದ, ಪ್ರಶಾಂತ್ ಹುಲಕುಂದ, ಪ್ರಬಲ ದೊಡ್ಡನವರ, ಬಸವರಾಜ ಬಳಗಾನೂರಮಠ, ಶ್ವೇತಾ ಪಾಲಂಕರ, ಸಂಗೀತ ಕಲಾಲ, ಶಶಿಕುಮಾರ, ಹನಿಮೇಶ, ನವಲಗುಂದ, ನವೀನ ತಿರ್ಲಾಪುರ, ಸಂತೋಷ ಲಮಾಣಿ, ಮಹಾಂತೇಶ ಗೊರವನಕೊಳ್ಳ, ಬಸವರಾಜ ನಾಯ್ಕರ, ಡಾ. ಕಿರಣಕುಮಾರ ರಾಯರ, ವನಮಾಲ ಖಾನಗೌಡ್ರ, ಪದ್ಮ ತಳಕಲ್ ಮುಂತಾದವರು ಉಪಸ್ಥಿತರಿದ್ದರು.

ಕರಿಯಪ್ಪ ಕೊಡವಳ್ಳಿ ನಿರೂಪಿಸಿದರು. ಡಾ.ಮಂಜುನಾಥ ತ್ಯಾಳಗಡೆ ಸ್ವಾಗತಿಸಿದರು. ಅಕ್ಷತಾ ಸಂಗಟಿ ಪ್ರಾರ್ಥಿಸಿದರು. ಪರಶುರಾಮ ಕಟ್ಟಿಮನಿ ವಂದಿಸಿದರು.