ಭವಿಷ್ಯ ರೂಪಿಸುವಲ್ಲಿ ಸಂಸ್ಕಾರ ಮುಖ್ಯ: ಶೇರಿಕಾರ

| Published : Apr 22 2024, 02:02 AM IST

ಸಾರಾಂಶ

ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನದ ಮೂಲಕ ಭವಿಷ್ಯದ ಜೀವನ ಕಟ್ಟಿಕೊಳ್ಳಲು ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ ಎಂದು ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನದ ಮೂಲಕ ಭವಿಷ್ಯದ ಜೀವನ ಕಟ್ಟಿಕೊಳ್ಳಲು ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ ಎಂದು ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪದವಿಪೂರ್ವ ಪರೀಕ್ಷೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ತಪಸ್ಸು ಮಾಡಿದಂತಾಗಿದೆ. ವಿದ್ಯಾರ್ಥಿಗಳಾದವರು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿರಬೇಕು. ಆ ಪ್ರಯತ್ನ ಇದ್ದಾಗ ಮಾತ್ರ ನಾವು ಮುನ್ನಡೆ ಸಾಗಲು ಸಾಧ್ಯವೆಂದರು.

ಮಹಿಳಾ ಪತಂಜಲಿ ಯೋಗ ಸಮಿತಿಯ ಸಂವಾದ ಪ್ರಭಾರಿ ಸುಮಂಗಲಾ ಚಕ್ರವರ್ತಿ, ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ರೇವಣಸಿದ್ದಪ್ಪ ಜೀವಣಗಿ, ಮುಡುಬಿ ಗುಂಡೇರಾವ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ರಮೇಶ ಬಡಿಗೇರ, ಮಲ್ಲಿನಾಥ ಸಂಗಶೆಟ್ಟಿ, ಎಚ್ ಎಸ್ ಬರಗಾಲಿ, ಎಂ ಎನ್ ಸುಗಂಧಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಗುರುಬಸಪ್ಪ ಸಜ್ಜನಶೆಟ್ಟಿ, ಗುಂಡಪ್ಪ ಕಾಟೇಕರ್, ಪ್ರಭುಲಿಂಗ ಮೂಲಗೆ, ವಿನೋದಕುಮಾರ ಜೇನವೇರಿ, ಸ್ವಾತಿ ಬೆಳಕೇರಿ, ಶಿವಶರಣ ಹಡಪದ ಪಾಲ್ಗೊಂಡಿದ್ದರು.