ಸಾರಾಂಶ
ಅಸಂಘಟಿತ ಕಾರ್ಮಿಕ ವಲಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹150 ಕೋಟಿ ಮೊದಲ ಹಂತದಲ್ಲಿ ನೀಡಿದ್ದಾರೆ. ಇದರಿಂದ ಅಸಂಘಟಿತ ವಲಯದಲ್ಲಿರುವ 40 ಲಕ್ಷ ಜನರಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ.
ಹುಬ್ಬಳ್ಳಿ:
ಬಡವರ ನೆರವಿಗೆ ಸಂತೋಷ ಲಾಡ್ ಫೌಂಡೇಶನ್ ಸದಾ ಸಿದ್ಧವಿದೆ. ದುಡಿಯುವ ಆಶಯವುಳ್ಳ ಬಡ ಆಟೋರಿಕ್ಷಾ ಚಾಲಕರು ಅರ್ಜಿ ಸಲ್ಲಿಸಿದರೆ ಅವರ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಅವರು ನಗರದ ಗೋಕುಲ ಗಾರ್ಡನ್‌ನಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 106 ಜನರಿಗೆ ಎಲಿಕ್ಟ್ರಿಕ್ ಆಟೋ, ಬೀದಿಬದಿ ವ್ಯಾಪಾರಸ್ಥರಿಗೆ ಕೊಡೆ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕ ವಲಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹150 ಕೋಟಿ ಮೊದಲ ಹಂತದಲ್ಲಿ ನೀಡಿದ್ದಾರೆ. ಇದರಿಂದ ಅಸಂಘಟಿತ ವಲಯದಲ್ಲಿರುವ 40 ಲಕ್ಷ ಜನರಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ. ಇನ್ನೊಂದು ತಿಂಗಳಿನಲ್ಲಿ ಅಸಂಘಟಿಕ ವಲಯಕ್ಕೆ ಸರ್ಕಾರದಿಂದ ಲಾಭವಾಗಲಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀ ಮಾತನಾಡಿ, ಲಾಡ್ ಅವರು ಶ್ರೀಮಂತಿಕೆ ಎಂಬ ಡ್ಯಾಮ್ ಇದ್ದಂತೆ. ಅದರಿಂದ ಹರಿಯುವ ಕೋಡಿ ಅನೇಕ ಬಡ-ಬಗ್ಗರ ಜೀವನೋಪಾಯಕ್ಕೆ ದಾರಿಯಾಗಿದೆ. ಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಮಾತೃ ಮಮತೆ ಲಾಡ್ ಅವರಲ್ಲಿದೆ ಎಂದರು.
ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ, ಧಾರವಾಡ ಮುರಘಾ ಮಠದ ಡಾ. ಮಲ್ಲಿಕಾರ್ಜುನ ಶ್ರೀ, ಮುಸ್ಲಿಂ ಧರ್ಮಗುರು ಭಾಷಾಪೀರಾ ಖಾದ್ರಿ, ಕ್ರಿಶ್ಚಿಯನ್ ಧರ್ಮಗುರುಗಳು, ಭಗೀರಥ ಪೀಠದ ಪುರುಷೋತ್ತಮ ಶ್ರೀ, ಇಳಕಲ್ಲನ ಗುರುಮಹಾಂತ ಶ್ರೀ ಹಾಗೂ ಮರಾಠಾ ಗುರುಪೀಠದ ಮಂಜುನಾಥ ಮಹಾರಾಜರು ಮಾತನಾಡಿದರು.ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕಿರ್ ಸನದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಸೇರಿದಂತೆ ಹಲವರಿದ್ದರು.