ಸಾರಾಂಶ
ವಿವಿಧೆಡೆಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯುವ ಪ್ರವಾಸಿಗರು ಇನ್ನು ಮುಂದೆ ವಾಹನಗಳಿಗಾಗಿ ಕಾಯಬೇಕಿಲ್ಲ. ತಮ್ಮ ಕೆಲಸ ಕಾರ್ಯಗಳಿಗೆ ವಾಹನ ಹುಡುಕಾಡುವ ಪ್ರಮೇಯವಿಲ್ಲ
ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭಗೊಂಡಿದ್ದು, ಪ್ರವಾಸಿಗರು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ್ ಹೇಳಿದರು.
ಅವರು ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ಆರಂಭವಾಗಿರುವ ಸಾರಾ ಬೈಕ್ ರೆಂಟಲ್ ಶೋ ರೂಂಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.ವಿವಿಧೆಡೆಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯುವ ಪ್ರವಾಸಿಗರು ಇನ್ನು ಮುಂದೆ ವಾಹನಗಳಿಗಾಗಿ ಕಾಯಬೇಕಿಲ್ಲ. ತಮ್ಮ ಕೆಲಸ ಕಾರ್ಯಗಳಿಗೆ ವಾಹನ ಹುಡುಕಾಡುವ ಪ್ರಮೇಯವಿಲ್ಲ. ಏಕೆಂದರೆ ಸಾರಾ ಬೈಕ್ ರೆಂಟಲ್ ನಲ್ಲಿ ತಮಗಿಷ್ಟವಾದ ಬೈಕ್ ಅನ್ನು ಬಾಡಿಗೆ ರೂಪದಲ್ಲಿ ಪಡೆದು ಹುಬ್ಬಳ್ಳಿ ಸುತ್ತಮುತ್ತ ಸಂಚರಿಸಬಹುದಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಬೈಕ್ ಬಾಡಿಗೆ ಪಡೆದು ತಮ್ಮ ನೆಚ್ಚಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇದರಿಂದ ತಮ್ಮ ಸಮಯ ಉಳಿತಾಯದ ಜತೆಗೆ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶಗಳಿಗೆ ಭೇಟಿ ನೀಡಬಹುದು ಎಂದರು.
ಸಾರಾ ಬೈಕ್ ಮಾಲೀಕ ರಾಜ್ ಭಟ್ ಮಾತನಾಡಿ, ಈಗಾಗಲೇ ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಈ ಬೈಕ್ ಬಾಡಿಗೆ ಆರಂಭಿಸಲಾಗಿದೆ. ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಇದೀಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲೂ ಚಾಲನೆ ನೀಡಲಾಗಿದೆ. ರೈಲ್ವೆ ಇಲಾಖೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬೈಕ್ ರೆಂಟಲ್ ಆರಂಭಿಸಲಾಗಿದೆ. ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಬಾಡಿಗೆ ನೀಡಲಾಗುತ್ತಿದ್ದು ಸೂಕ್ತ ದಾಖಲೆ ನೀಡಿ ಬೈಕ್ ಪಡೆಯಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರಶಾಂತ್ ಶೆಟ್ಟಿ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.