ಸಾರಾಂಶ
ನರ್ಸರಿ ಶಾಲೆ ವಿದ್ಯಾರ್ಥಿನಿಯೊಬ್ಬಳು ಕೇವಲ 40 ಸೆಕೆಂಡುಗಳಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ರಾಜಧಾನಿಗಳ ಹೆಸರು ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ. ರೋಮಿಯೋ ಟೈಸನ್ ಮತ್ತು ಮಾಧುರಿ ಅವರ ಪುತ್ರಿಯಾದ ಸಾರಾ ರೋಮಿಯೋ ಅವರು ಈ ಸಾಧನೆ ಮಾಡಿದ್ದು.
ಕನ್ನಡಪ್ರಭ ವಾರ್ತೆ ಮೈಸೂರು
ನರ್ಸರಿ ಶಾಲೆ ವಿದ್ಯಾರ್ಥಿನಿಯೊಬ್ಬಳು ಕೇವಲ 40 ಸೆಕೆಂಡುಗಳಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ರಾಜಧಾನಿಗಳ ಹೆಸರು ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ.ರೋಮಿಯೋ ಟೈಸನ್ ಮತ್ತು ಮಾಧುರಿ ಅವರ ಪುತ್ರಿಯಾದ ಸಾರಾ ರೋಮಿಯೋ ಅವರು ಈ ಸಾಧನೆ ಮಾಡಿದ್ದು, 4.6 ವರ್ಷದ ಈ ಬಾಲಕಿಯು ಮನೆ ಪಾಠದ ವೇಳೆ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಪಾಠವನ್ನೂ ಓದುತ್ತ ದೇಶದ ರಾಜ್ಯ ಮತ್ತು ರಾಜಧಾನಿಗಳನ್ನು ಅಭ್ಯಸಿಸಿದ್ದಳು ಎಂದು ಆಕೆಯ ತಾಯಿ ಮಾಧುರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನವರಿ 7ರಂದು ನಾವು ಐಬಿಆರ್ ಮೇಲ್ ವಿಳಾಸಕ್ಕೆ ವೀಡಿಯೋ ತುಣುಕು ಕಳುಹಿಸಿದ್ದೆವು. ಅದು ಜನವರಿ ಹದಿನಾಲ್ಕನೇ ತಾರೀಕಿನಂದು ಐಬಿಆರ್ ನಿಂದ ನಿಮ್ಮ ಮಗು ಆಯ್ಕೆಯಾಗಿದೆ ಎಂದು ಪ್ರಶಂಶನ ಸಂದೇಶ ಕಳುಹಿಸಿದರು. ಫೆ. 4 ರಂದು ಗೂಗಲ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ಆಯ್ಕೆಯಯಲ್ಲಿ ಅತಿ ಕಡಿಮೆ ವಯಸ್ಸಿನ ಹಲವು ವಿದ್ಯಾರ್ಥಿಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಪ್ರಸ್ತುತಪಡಿಸಿದ ಸಾರಾಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಸೈಂಟ್ ಬ್ರಿಗೇಡ್ ನರ್ಸರಿ ಶಾಲೆಯಲ್ಲಿ ಓದುತ್ತಿರುವ ಈಕೆ ಪ್ರಾರಂಭದಿಂದಲೂ ಅಭಿನಯ, ಓದು, ನೃತ್ಯ ಮುಂತಾದವುಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದಾಗಿ ಹೇಳಿದರು.
ಬಾಲಕಿ ಸಾರಾ ರೋಮಿಯೋ, ಮಾರ್ಗದರ್ಶಕ ಬಿ. ಕಿರಣ್‌ಕುಮಾರ್, ಬಾಲಕಿಯ ತಂದೆ ರೋಮಿಯೋ ಟೈಸನ್ ಇದ್ದರು.ಡಾ.ಅಮ್ಮಸಂದ್ರ ಸುರೇಶ್‌ಗೆ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ
ಮೈಸೂರು: ಆನೆಗೊಂದಿ ಪೇಟೆಯೊಳಗೆ ಕೃತಿಗಾಗಿ ಡಾ. ಅಮ್ಮಸಂದ್ರ ಸುರೇಶ್ ಅವರು ಕರ್ನಾಟಕ ಜಾನಪದ ಪರಿಷತ್ತು ಕೊಡಮಾಡುವ 2025ನೇ ಸಾಲಿನ ಲೋಕ ಸರಸ್ವತಿ ಗ್ರಂಥ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆ.8 ಮತ್ತು 9 ರಂದು ಜಾನಪದ ಲೋಕದಲ್ಲಿ ಮಹಿಳಾ ಜಾನಪದ ಲೋಕೋತ್ಸವ ಕಾರ್ಯಕ್ರಮ ನಡೆಯಲಿದೆ. ಫೆ.9 ರಂದು ಸಂಜೆ 5.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ತಿಳಿಸಿದ್ದಾರೆ. ಮೈಸೂರು ಅಂಚೆ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಅಮ್ಮಸಂದ್ರ ಸುರೇಶ್ ಇದುವರೆಗೂ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.