ಸಾರಾಂಶ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಮಾಮಹೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.ಬೆಳಗಿನ ಜಾವದಿಂದಲೇ ಪಟ್ಟಣದ ಬಸವೇಶ್ವರ ದೇವಸ್ಥಾನ, ಶ್ರೀ ಕಾಳಮಂಟೇಶ್ವರ ದೇವಸ್ಥಾನದಲ್ಲಿ ಹೋಮ ಹವನ ನಡೆಸಿ ವಿವಿಧ ಹೂವಿನಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸರಗೂರು
ಪಟ್ಟಣದಲ್ಲಿ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉಮಾಮಹೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.
ಬೆಳಗಿನ ಜಾವದಿಂದಲೇ ಪಟ್ಟಣದ ಬಸವೇಶ್ವರ ದೇವಸ್ಥಾನ, ಶ್ರೀ ಕಾಳಮಂಟೇಶ್ವರ ದೇವಸ್ಥಾನದಲ್ಲಿ ಹೋಮ ಹವನ ನಡೆಸಿ ವಿವಿಧ ಹೂವಿನಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಿ ನಂತರ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗಿಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಉತ್ಸವ ಮೂರ್ತಿ ಮರೆವಣಿಗೆಯನ್ನು ಅದ್ದೂರಿಯಾಗಿ ನಡೆಸಸಲಾಯಿತು, ಪೂಜಾ ಕಾರ್ಯವನ್ನು ಶಿವಾರ್ಚಕರಾದ ವಿರುಪಾಕ್ಷ ಗುರೂಜಿ, ಸುಬ್ಬಣ್ಣ ಗುರೂಜಿ, ನೆರವೇರಿಸಿದರು.
ಪಪಂ ಸದಸ್ಯ ವೀರೇಶ್, ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಎಸ್.ಎನ್. ಮೋಹನ್ ಕುಮಾರ್, ಉಪಾಧ್ಯಕ್ಷ ಜಿ. ನಾಗರಾಜು, ದಯಾಶಂಕರ್, ಗಣೇಶ್, ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿ ಅವಿನಾಶ್, ಖಜಾಂಚಿ, ಚಂದ್ರಪ್ಪ.
ಮಹೇಶ್, ಗಿರೀಶ್, ಸೋಮಶೇಖರ್, ಶಾಂತ, ಸುಪ್ರೀತ್, ವಿಜಯ್, ರುದ್ರೇಶ್, ಗುರು, ಭವೇಶ್, ಇಂದ್ರೇಶ್, ಅಮೀತ್, ಸಮಾಜದ ಮುಖಂಡರು, ಯುವಕರು ಭಾಗಿಯಾಗಿದ್ದರು.