ನಾವು ಇನ್ನೂ ವಸಾಹತುಶಾಹಿಯ ಗುಂಗಿನಲ್ಲಿದ್ದೇವೆ

| Published : Apr 28 2025, 12:46 AM IST

ನಾವು ಇನ್ನೂ ವಸಾಹತುಶಾಹಿಯ ಗುಂಗಿನಲ್ಲಿದ್ದೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಜಗತ್ತಿನಲ್ಲಿ ವಸಾಹತುಶಾಹಿ ಪ್ರಭಾವವು ಗುರುತರವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾವು ಇನ್ನೂ ವಸಾಹತುಶಾಹಿಯ ಗುಂಗಿನಲ್ಲಿದ್ದೇವೆ ಎಂದು ಸಂತ ಫಿಲೋಮಿನಾ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಅರವಿಂದ ಕಿಸ್ಪೊಟ್ಟ ಹೇಳಿದರು.ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದಿಂದ ವಸಾಹತುಶಾಹಿ ಪರಂಪರೆ: ಶಕ್ತಿ, ಸಂಸ್ಕೃತಿ ಮತ್ತು ಗುರುತು ಕುರಿತು ಗುರುವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಆಧುನಿಕ ಜಗತ್ತಿನಲ್ಲಿ ವಸಾಹತುಶಾಹಿ ಪ್ರಭಾವವು ಗುರುತರವಾಗಿದೆ. ಅಸ್ತಿತ್ವ, ಪ್ರತ್ಯೇಕತೆ, ಧಾರ್ಮಿಕ ಚಿಂತನೆ ಮತ್ತು ವಸಾಹತುಶಾಹಿಯ ಪರಿಣಾಮಗಳು ಡೇನಿಯಲ್ ಡೆಫೋ ವಿರಚಿತ ರಾಬಿನ್ಸನ್ ಕ್ರೂಸೋ ಕಾದಂಬರಿಯಲ್ಲಿ ಪ್ರತಿಬಿಂಬಿತವಾಗಿವೆ ಎಂದರು.ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಎ. ವಿನಯ್ ವಿಚಾರ ಮಂಡಿಸಿದರು.ಪ್ರಾಂಶುಪಾಲ ಡಾ. ರೇಚಣ್ಣ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪಿ. ವಸುಮತಿ ಇದ್ದರು. ವಿದ್ಯಾ ವೃಂದ ಪ್ರಾರ್ಥಸಿದರು. ಕಲ್ಪನಾ ಕಳಂಗಿ ಸ್ವಾಗತಿಸಿದರು. ಎಸ್.ಆರ್. ಪವಿತ್ರಾ ವಂದಿಸಿದರು. ಅನನ್ಯ ಯಾದವ್ ನಿರೂಪಿಸಿದರು.