ಸೀರೆ ಭಾರತೀಯ ಸಂಸ್ಕೃತಿ ಪ್ರತೀಕ: ತಾಪಡಿಯಾ

| Published : Jun 12 2024, 12:43 AM IST

ಸಾರಾಂಶ

ಗುಳೇದಗುಡ್ಡ ಪಟ್ಟಣದಲ್ಲಿ ಅಖಿಲ ಭಾರತ ಮಾಹೇಶ್ವರಿ ಸಂಘಟನೆ ಹಾಗೂ ಮಾಹೇಶ್ವರಿ ಸಖಿ ಮಂಡಳಿ ವತಿಯಿಂದ ಸಾಡಿ ವಾಕ್‌ ಥಾನ್‌ ನಡೆಯಿತು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಭಾರತೀಯರು ಸಂಸ್ಕೃತಿ ಮತ್ತು ಪರಂಪರೆ ಮರೆತು ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಸಕ್ತಿ ವಹಿಸುತ್ತಿದ್ದೇವೆ. ಮಹಿಳೆಯರು ಸೀರೆ ಧರಿಸುವುದನ್ನು ಕಡಿಮೆ ಮಾಡಿ ಪಾಶ್ಚಾತ್ಯ ಉಡುಪು ಧರಿಸುವುದು ಹೆಚ್ಚಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆ ಮತ್ತು ಬಟ್ಟೆಗಳನ್ನು ಧರಿಸಬೇಕು ಎಂದು ಲತಾಬಾಯಿ ತಾಪಡಿಯಾ ಹೇಳಿದರು.

ಈಚೇಗೆ ಅಖಿಲ ಭಾರತ ಮಾಹೇಶ್ವರಿ ಸಂಘಟನೆ ಹಾಗೂ ಮಾಹೇಶ್ವರಿ ಸಖಿ ಮಂಡಳಿ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾಡಿ ವಾಕ್‌ ಥಾನ್‌ ಕಾರ್ಯಕ್ರಮದಲ್ಲಿ ಅವರು ಮಾನಾಡಿ, ಮಹಿಳೆಯರು ಹಬ್ಬ ಹರಿದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸೀರೆ ತೊಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆಯಿಂದ ದೇಶದಾದ್ಯಂತ ಸಾಡಿ ವಾಕ್ ಥಾನ್ ಹಮ್ಮಿಕೊಳ್ಳುವ ಮೂಲಕ ಮಹಿಳೆಯರು ಭಾರತೀಯ ಉಡುಪುಗಳಿಗೆ ಪ್ರಾಶಸ್ತ್ಯ ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ವಾಕ್‌ ಥಾನ್‌ ಗೆ ತಹಶೀಲ್ದಾರ್ ಎಂ.ಮಂಗಳಾ ಚಾಲನೆ ನೀಡಿದರು. ಅರಳಿಕಟ್ಟಿಯಿಂದ ಪ್ರಾರಂಭಗೊಂಡು ಚೌ ಬಜಾರ್ ಮೂಲಕ ಹಾಯ್ದು ಬಾಲಾಜಿ ದೇವಸ್ಥಾನ ತಲುಪಿತು. ಸಂಘದ ಅಧ್ಯಕ್ಷೆ ಶರಿಯಾ ಜಾಜು, ಉಪಾಧ್ಯಕ್ಷೆ ಚಂದ್ರಕಲಾ ಸೋನಿ, ವಂದನಾ ಭಟ್ಟಡ, ಮೇಘಾ ರಾಠಿ, ಸುಮನಬಾಯಿ ದೂತ್, ಶಾಂತಾಬಾಯಿ ಬಜಾಜ, ಪ್ರಮಿಳಾ ಮನಿಯಾರ, ದುರ್ಗಾಬಾಯಿ ಬಜಾಜ, ಸುನಿತಾ ರಾಠಿ, ಸ್ವಾತಿ ಮಾಲಪಾಣಿ, ಪ್ರಮಿಳಾ ಮನಿಯಾರ, ಸಂಗೀತಾ ದೂತ್, ಸುಧಾ ಇನಾನಿ, ಆರತಿ ಝಂವರ, ಮೋಹಿನಿಬಾಯಿ ಭಟ್ಟಡ ಸೇರಿದಂತೆ ಇತರರು ಇದ್ದರು.