ಸಾರಾಂಶ
ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ 2026 ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ದೈವ ಹಾಗೂ ದೇವರ ಸಾನಿಧ್ಯ ಇರುವ ಏಕೈಕ ಕ್ಷೇತ್ರವಾಗಿದ್ದು ಕ್ಷೇತ್ರದ ಬ್ರಹ್ಮಕಲಶೋತ್ಸವ ಊರ ಪರ ಊರ ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತದೆಯೆಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದ್ದಾರೆ.ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ 2026 ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಳದಲ್ಲಿ ನಡೆದ ಸರ್ವ ಭಕ್ತರ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಅಪ್ಪುಯಾನೆ ಶ್ರೀನಿವಾಸ ಪೂಜಾರಿ ಆಶೀರ್ವದಿಸಿದರು.ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾದ ಚಂದ್ರಶೇಖರ ಬೆಲ್ವಡ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ನಳಿನ್ ಕುಮಾರ್ ಕಟೀಲ್ ಅವರನ್ನು ಗೌರವಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್, ಸಸಿಹಿತ್ಲು ಸಾರಂತಾಯ ಗರೋಡಿಯ ಗೌರವಾಧ್ಯಕ್ಷ ದಯಾನಂದ ಗುರಿಕಾರ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಬಿಜೆಪಿ ನಾಯಕರಾದ ಈಶ್ವರ್ ಕಟೀಲ್, ಕಸ್ತೂರಿ ಪಂಜ,, ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ, ಕೊಲ್ನಾಡುಗುತ್ತು, ಸದಾಶಿವ ಶೆಟ್ಟಿ ಮುರ ವಿಶ್ವನಾಥ ಉಡುಪಿ, ಸಾರಂತಾಯ ಗೆರೋಡಿಯ ಜಗನ್ನಾಥ ಕೋಟ್ಯಾನ್, ಪ್ರಕಾಶ್ ನಿಸರ್ಗ, ಕದಿಕೆ ಮೊಗವೀರ ಸಭಾದ ಗಿರೀಶ್ ಶ್ರೀಯಾನ್, ಬ್ರಾಹ್ಮಣ ಸಭಾದ ಅಧ್ಯಕ್ಷ ಶ್ರೀಕಾಂತ್ ಭಟ್, ಪದ್ಮಶಾಲಿ ಸಭಾದ ಮೋಹನ್ ಶೆಟ್ಟಿಗಾರ್, ಬಪ್ಪನಾಡು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಮಿತಿಯ ಸುನೀಲ್ ಅಳ್ವ, ಪ್ರಸಾದ್ ಶೆಟ್ಟಿ ಮರಕಡ, ನಿರಂಜನ್, ನವೀನ್ ಚಂದ್ರ ಪೂಜಾರಿ, ಗೀತಾ ಪಿ. ಕುಮಾರ್, ಶಶೀಂದ್ರ ಸಾಲ್ಯಾನ್ ದಯಾನಂದ ಗುರಿಕಾರ, ಗಣೇಶ್ ಬಂಗೇರ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.ರಮೇಶ್ ಬಂಗೇರ ಸ್ವಾಗತಿಸಿ, ವಂದಿಸಿದರು, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರಪ್ರಸಾದ್ ಎಕ್ಕಾರು ನಿರೂಪಿಸಿದರು.