ಪ್ರವಚನ ಸೇವಾ ಸಮಿತಿಗೆ ಶಶಿಕಲಾ ಅಧ್ಯಕ್ಷೆ

| Published : Mar 30 2025, 03:03 AM IST

ಸಾರಾಂಶ

ನಗರದ ಚನ್ನಬಸವಾಶ್ರಮದಲ್ಲಿ ವಚನ ಜಾತ್ರೆ-2025 ಹಾಗೂ ಡಾ.ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವ ಏ.10 ರಿಂದ 21ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಎಲ್ಲ ಸದ್ಭಕ್ತರ ಒಮ್ಮತದಿಂದ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷೆಯನ್ನಾಗಿ ಶಶಿಕಲಾ ಅಶೋಕ ವಾಲೆ ಅವರನ್ನು ನೇಮಕ ಮಾಡಲಾಯಿತು.

ಭಾಲ್ಕಿ: ನಗರದ ಚನ್ನಬಸವಾಶ್ರಮದಲ್ಲಿ ವಚನ ಜಾತ್ರೆ-2025 ಹಾಗೂ ಡಾ.ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವ ಏ.10 ರಿಂದ 21ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ಎಲ್ಲ ಸದ್ಭಕ್ತರ ಒಮ್ಮತದಿಂದ ಪ್ರವಚನ ಸೇವಾ ಸಮಿತಿಯ ಅಧ್ಯಕ್ಷೆಯನ್ನಾಗಿ ಶಶಿಕಲಾ ಅಶೋಕ ವಾಲೆ ಅವರನ್ನು ನೇಮಕ ಮಾಡಲಾಯಿತು.

ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದ ನಡೆದಾಡುವ ದೇವರಾಗಿದ್ದರು. ಅವರ ಸ್ಮರಣೆ ನಮ್ಮೆಲ್ಲರಿಗೆ ಬಸವ ಮಾರ್ಗವನ್ನು ತೋರಿಸುತ್ತದೆ. ನಮ್ಮ ಜೀವನ ಸುಖಿ ಮತ್ತು ಸಮೃದ್ಧಿಗೊಳಿಸುತ್ತದೆ. ಅದಕ್ಕಾಗಿ ಪೂಜ್ಯರ ಸ್ಮರಣೋತ್ಸವದ ನಿಮಿತ್ಯ ನಾಡಿನ ಶ್ರೇಷ್ಠ ಮಠಾಧೀಶರು, ಅನುಭಾವಿಗಳಾದ ಸಿದ್ಧಬಸವ ಮಹಾಸ್ವಾಮಿಗಳಿಂದ ಪ್ರವಚನ ನಡೆಯಲಿದೆ ಎಂದು ಗುರುಬಸವ ಪಟ್ಟದ್ದೇವರು ಆಶೀರ್ವಚನ ನಿಡಿದರು.

ಸೇವಾ ಸಮಿತಿ ಅಧ್ಯಕ್ಷೆ ಶಶಿಕಲಾ ಅಶೋಕ ವಾಲೆ ಮಾತನಾಡಿ, ಈ ಅವಕಾಶ ದೊರೆತಿರುವುದು ನಮ್ಮ ಕುಟುಂಬದ ಪುಣ್ಯವೇ ಆಗಿದೆ. ನಾನು ತನುಮನ ಧನದಿಂದ ಈ ಕಾರ್ಯಕ್ಕೆ ಸಮರ್ಪಣೆಯಿಂದ ದುಡಿಯುತ್ತೇನೆ. ಪೂಜ್ಯರ ಆಶೀರ್ವಾದ ಹಾಗೂ ತಮ್ಮೆಲ್ಲರ ಸಹಕಾರದಿಂದ ವಚನ ಜಾತ್ರೆ, ಪೂಜ್ಯರ ಸ್ಮರಣೋತ್ಸವ ಮತ್ತು ಪ್ರವಚನ ಯಶಸ್ವಿಯಾಗಿ ಮಾಡೋಣವೆಂದು ನುಡಿದರು.

ಪ್ರೊ.ಶಂಭುಲಿಂಗ ಕಾಮಣ್ಣ, ಬಸವರಾಜ ಮರೆ, ವಿಶ್ವನಾಥ, ಬಿರಾದಾರ, ಶರಣಪ್ಪ ಬಿರಾದಾರ, ಸಂತೋಷ ಹಡಪದ, ಮಲ್ಲಮ್ಮ ನಾಗನಕೇರೆ, ಮಧು ವಾಲೆ, ಧನರಾಜ ಬಂಬುಳಗೆ, ಸುರೇಶ ಪುರಂತ ಉಪಸ್ಥಿತರಿದ್ದರು.