ಸಾರಾಂಶ
- ಪ್ರತಿಭಟನೆಯಲ್ಲಿ ಹಿರೇಮಠ ಕೇದಾರಲಿಂಗ ಸ್ವಾಮೀಜಿ ಆಗ್ರಹ- - -
- ರೈತ ಸಂಘ, ಹಸಿರು ಸೇನೆ, ಖಡ್ಗ ಸಂಘ ಪ್ರತಿಭಟನೆ- ಕೆರೆ-ಕಟ್ಟೆಗಳು ತುಂಬದೇ ಕೃಷಿ ಚಟುವಟಿಕೆಗಳಿಗೆ ತೊಂದರೆ
- - - ಚನ್ನಗಿರಿ: ತಾಲೂಕಿನ ಸಾಸಿವೆಹಳ್ಳಿ ಮತ್ತು ಉಬ್ರಾಣಿ ಏತನೀರಾವರಿ ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೆ ಶೀಘ್ರದಲ್ಲಿಯೇ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಖಡ್ಗ ಸಂಘ ಕಾರ್ಯಕರ್ತರು ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಶ್ರೀಗಳು ಮಾತನಾಡಿ, ಚನ್ನಗಿರಿ ತಾಲೂಕು ಅಡಕೆ ನಾಡಾಗಿದೆ. ರೈತರು ಕೃಷಿಯನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ತಾಲೂಕಿನಲ್ಲಿ ಹೆಚ್ಚಾಗಿ ಅಡಕೆ ತೋಟಗಳು ಮತ್ತು ಕೃಷಿ ಭೂಮಿ ಇದ್ದು ರೈತರು ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ ಅವಲಂಬಿಸಿದ್ದಾರೆ. ಕೆರೆ-ಕಟ್ಟೆಗಳು ತುಂಬದೇ ಇರುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕ್ಷೇತ್ರದ ಶಾಸಕರು ಈ ಎರಡು ನೀರಾವರಿ ಯೋಜನೆಗಳಿಗೆ ಒಳಪಡುವ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಪ್ರಸ್ತುತ ಮುಕ್ತಾಯಗೊಂಡಿದೆ. ಆದರೂ, ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಕ್ಷೇತ್ರ ಶಾಸಕರು ಶೀಘ್ರದಲ್ಲಿಯೇ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಸಿ.ಆರ್. ತಿಪ್ಪೇಶಪ್ಪ, ನಿಂಗಪ್ಪ, ಕೃಷ್ಣಪ್ಪ, ಶಿವಕುಮಾರ್, ವೀರಪ್ಪ, ಚಂದ್ರಪ್ಪ, ಗಂಗಾಧರಪ್ಪ, ಶಾಂತ ಕುಮಾರ್, ಪ್ರದೀಪ್, ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.
- - - -30ಕೆಸಿಎನ್‌ಜಿ2:ಸಾಸಿವೆಹಳ್ಳಿ ಮತ್ತು ಉಬ್ರಾಣಿ ಏತನೀರಾವರಿ ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೆ ಶೀಘ್ರ ನೀರನ್ನು ಹರಿಸಬೇಕು ಎಂದು ಚನ್ನಗಿರಿ ಪಟ್ಟಣದಲ್ಲಿ ಒತ್ತಾಯಿಸಿ ಪ್ರತಿಭಟನೆ ನಡೆಯಿತು.