ಸಾರಾಂಶ
ಶ್ರೀ ಭೈತೂರಪ್ಪ ಶ್ರೀ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಶ್ರೀ ಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಸೇರಿದಂತೆ ವಿವಿಧ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಳಗ್ಗಿನಿಂದ ಶ್ರೀ ಸುಬ್ರಹ್ಮಣ್ಯ ನಾಗ ದೇವತಾ ಗುಡಿಯಲ್ಲಿ ಶ್ರೀ ನಾಗದೇವರಿಗೆ ತನುತಂಬಿಲ, ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಹರಿದ್ರಾರ್ಣವ ಅಭಿಷೇಕ, ಕ್ಷೀರಾಭಿಷೇಕ ಸೇವೆಗಳೊಂದಿಗೆ ವಿಶೇಷ ಕೈಂಕರ್ಯವನ್ನು ನೆರವೇರಿಸಲಾಯಿತು.ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಮತ್ತು ನರಸಿಂಹ ಭಟ್ ಅವರು ದಿನದ ವಿಶೇಷ ಪೂಜಾ ಕೈಂಕರ್ಯ ಮಹಾಮಂಗಳಾರತಿ ನೆರವೇರಿಸಿದರು. ಭಕ್ತಾದಿಗಳು ದೇವರ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೇವಾಲಯದ ಟ್ರಸ್ಟಿ ಕಾರ್ಯದರ್ಶಿ ಬಿ.ಸಿ.ದಿನೇಶ್, ತಕ್ಕ ಜಗರಂಡ ಹ್ಯಾರಿಕಾರ್ಯಪ್ಪ, ಪ್ರಧಾನ ಟ್ರಸ್ಟಿಗಳಾದ ಕೆ.ಎಸ್.ಮಂಜುನಾಥ್, ದತ್ತ ಸೋಮಣ್ಣ ಸೇರಿದಂತೆ ಊರಿನ ಹಿರಿಯರು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಮಹಾ ಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.