ಸಾರಾಂಶ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣ ಆಸ್ರಣರಿಗೆ ‘ದುರ್ಗಾಪ್ರಸಾದ’ , ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಚುಟುಕು ದಾಸೋಹಿ ಗೌರವ ಪುರಸ್ಕಾರ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ, ದ.ಕ. ಜಿಲ್ಲಾ ಸಮಿತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಇವರ ವತಿಯಿಂದ ಸೆ.೫ ರಂದು ಕಟೀಲು ಕ್ಷೇತ್ರದಲ್ಲಿ ಶಿಕ್ಷಕ ದಿನಾಚರಣೆ ಮತ್ತು ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ ೭ನೇ ಸಮ್ಮೇಳನ ಶ್ರೀಕಾಂತ್ ಕೆ.ವಿ. ಹಿರಿಯ ಶಿಕ್ಷಕ ಸಾಹಿತಿ ಹೊಸಕೋಟೆ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪರಿಷತ್‌ನ ರಾಜ್ಯ ಸಂಚಾಲಕ ಕೃಷ್ಣ ಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ. ದಿನದ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ , ಕವಿಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.ರಾಜ್ಯ ಗೌರವ ಪುರಸ್ಕಾರ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣ ಆಸ್ರಣರಿಗೆ ‘ದುರ್ಗಾಪ್ರಸಾದ’ , ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಚುಟುಕು ದಾಸೋಹಿ ಗೌರವ ಪುರಸ್ಕಾರ ನೀಡಲಾಗುವುದು. ಸಾಹಿತಿಗಳಿಗೂ ಪ್ರಶಸ್ತಿ: ಶಿಕ್ಷಕ ಸಾಹಿತಿಗಳಾದ ವಿ.ಬಿ. ಕುಳಮರ್ವ ಕಾಸರಗೋಡು , ಡಾ. ಸುರೇಶ ನೆಗಳಗುಳಿ ಮಂಗಳೂರು , ಮುನಿರಾಜ ರೆಂಜಾಳ ಮೂಡುಬಿದಿರೆ, ಜಯಾನಂದ ಪೆರಾಜೆ, ಶಾಂತಾ ಪುತ್ತೂರು , ಸುಮಲತಾ ಬಿ.ಎಸ್. ಬಾಣಸವಾಡಿ , ಡಾ. ಪ್ರಭುಸ್ವಾಮಿ ಹಾಲಿವಾಡಿ ಮಠ ಹಂಸಭಾವಿ, ವಿದ್ವಾನ್ ರಘುಪತಿ ಭಟ್ ಉಡುಪಿ, ರವಿರಾಜ ತಿರುಮಲೆ ಹಾನಗಲ್ , ರವೀಂದ್ರ ಶೆಟ್ಟಿ ಬಳಂಜ ಇವರಿಗೆ ಚುಟುಕು ಚಿನ್ಮಯಿ ರಾಜ್ಯ ಶಿಕ್ಷಕ ಸಾಹಿತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.