ಉತ್ಸವ ವೇಳೆ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನದವರೆಗೆ ಕೆರೆ ಬಳಿ ಬಾಯಿಬೀಗ ಮತ್ತು ದೇವರ ಉತ್ಸವ ನಡೆಯಿತು. ಎರಡೂ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಂಸದಿಂದ ಆಹಾರ ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಸಾತನೂರು ಗ್ರಾಮದಲ್ಲಿ ಗ್ರಾಮಸ್ಥರು ವಿಜೃಂಭಣೆಯಿಂದ ಶ್ರೀಮಸಣಮ್ಮ ದೇವಿ ಹಬ್ಬ ಆಚರಿಸಿದರು.ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀಮಸಣಮ್ಮ ದೇವತೆಯ ಕರಗ ಮಹೋತ್ಸವ ಹಾಗೂ ಶನಿವಾರ ಪಿತೃಪಕ್ಷ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಹಳೇಗುಡಿ ಹಾಗೂ ಹೊಸಗುಡಿ ದೇವಸ್ಥಾನಗಳಲ್ಲಿ ಮಸಣಮ್ಮನ ಹಬ್ಬವನ್ನು ಆಚರಿಸಲಾಯಿತು. ಶುಕ್ರವಾರ ರಾತ್ರಿ 9ಕ್ಕೆ ಗ್ರಾಮದ ಹೊರವಲಯದ ಕೆರೆ ಬಳಿ ಸೇರಿದ ನೂರಾರು ಭಕ್ತರ ಸಮ್ಮುಖದಲ್ಲಿ ಮಸಣಮ್ಮ ದೇವಿಯ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಶ್ರೀಮಸಣಮ್ಮ ದೇವಿ ಕರಗ ತೆಂಗಿನ ಹೊಂಬಾಳೆ ಉತ್ಸವ ಜರುಗಿತು. ಗ್ರಾಮದ ಕೆರೆ ಬಳಿ ದೇವಿ ಪೂಜೆ ನೆರವೇರಿಸಿ ಪೂಜಾರಿ ತಲೆ ಕರಗ ಹೊತ್ತು ತರಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗದ ಮೆರವಣಿಗೆ ನಡೆಸಿ, ಮಧ್ಯರಾತ್ರಿ 12ಕ್ಕೆ ಪೂರ್ಣಗೊಳಿಸಲಾಯಿತು. ಆ ನಂತರ ಹಳೇ ಗುಡಿಯಲ್ಲಿ ಪೂಜೆ ನೆರವೇರಿಸಿ ಮತ್ತೊಂದು ಕರಗ ಉತ್ಸವ ನಡೆಸಲಾಯಿತು. ಕರಗ ಉತ್ಸವ ವೇಳೆ ಕುರಿ-ಮೇಕೆಗಳನ್ನು ಬಲಿ ನೀಡಲಾಯಿತು.ಉತ್ಸವ ವೇಳೆ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನದವರೆಗೆ ಕೆರೆ ಬಳಿ ಬಾಯಿಬೀಗ ಮತ್ತು ದೇವರ ಉತ್ಸವ ನಡೆಯಿತು. ಎರಡೂ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಂಸದಿಂದ ಆಹಾರ ತಯಾರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.
ಮಸಣಮ್ಮ ದೇವಿಯ ಹಳೆ ಮತ್ತು ಹೊಸ ದೇವಸ್ಥಾನದ ಬೀದಿಗಳನ್ನು ಹೂವಿನ ಹಾರದ ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಹೂವಿನ ತೋರಣಗಳ ಮಧ್ಯಭಾಗದಲ್ಲಿ ದ್ರಾಕ್ಷಿ, ಸೇಬು, ಮೂಸಂಬಿ, ಕ್ಯಾರೆಟ್, ಬದನೆಕಾಯಿ, ದಾಳಿಂಬೆ ಹಣ್ಣುಗಳನ್ನು ಕಟ್ಟಿ ಅಲಂಕಾರ ಮಾಡಲಾಗಿತ್ತು.ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಸಾಹಿತಿ ಟಿ.ಸತೀಶ್ ಜವರೇಗೌಡ ಆಯ್ಕೆ
ಮಂಡ್ಯ:ಸಾಹಿತಿ ಹಾಗೂ ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿಗೆ ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.ಸಾಹಿತ್ಯ ಕೃಷಿ ಹಾಗೂ ಸಂಘಟನಾ ಕಾರ್ಯ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ತಾಲೂಕಿನ ಮಂಗಲ ಗ್ರಾಮದ ಸಾಹಿತಿ ಟಿ. ಸತೀಶ್ ಜವರೇಗೌಡರು ಈವರೆಗೆ ಆರು ಕವನ ಸಂಕಲನ ಹಾಗೂ ಮೂರು ಸಂಪಾದಿತ ಕೃತಿಗಳು ಸೇರಿದಂತೆ 9 ಕೃತಿಗಳನ್ನು ಪ್ರಕಟಿಸಿದ್ದು, ಹಲವು ಕೃತಿಗಳಿಗೆ 50ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.ಕವಿ ಸತೀಶ್ ಜವರೇಗೌಡರು ನಾಡಿನ ಪ್ರಖ್ಯಾತ ಕವಯತ್ರಿ ಡಾ.ಪ್ರತಿಭಾ ನಂದಕುಮಾರ್ ಅವರ ಉದ್ಘಾಟನೆ ಮತ್ತು ಪ್ರಖ್ಯಾತ ಹಿರಿಯ ಕವಿ ಡಾ.ಅಲ್ಲಮಪ್ರಭು ಬೆಟ್ಟದೂರು ಅವರ ಅಧ್ಯಕ್ಷತೆಯಲ್ಲಿ ಅ.17 ರಂದು ಬೆಳಗ್ಗೆ 10-30 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿ ಆವರಣದ ಮೈಸೂರು ವಿವಿ ಬಿ.ಎಂ.ಶ್ರೀ. ಸಭಾಂಗಣದಲ್ಲಿ ನಡೆಯಲಿರುವ ಪ್ರಧಾನ ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನ ವಾಚನ ಮಾಡಲಿದ್ದಾರೆ.